Tuesday, Apr 23 2024 | Time 19:32 Hrs(IST)
Election Share

ಭಾರತ ಮತ್ತು ಪಾಕಿಸ್ತಾನ ದೂರವಿರಲು ಸಾಧ್ಯವಿಲ್ಲ: ಖುರೇಷಿ

ಭಾರತ ಮತ್ತು ಪಾಕಿಸ್ತಾನ ದೂರವಿರಲು ಸಾಧ್ಯವಿಲ್ಲ: ಖುರೇಷಿ
ಭಾರತ ಮತ್ತು ಪಾಕಿಸ್ತಾನ ದೂರವಿರಲು ಸಾಧ್ಯವಿಲ್ಲ: ಖುರೇಷಿ

ಇಸ್ಲಾಂಬಾದ್‌, ಏ 20 (ಯುಎನ್‌ಐ) ಭಾರತ ಮತ್ತು ಪಾಕಿಸ್ತಾನ ನೆರೆಹೊರೆಯ ರಾಷ್ಟ್ರಗಳಾಗಿದ್ದು, ಪರಸ್ಪರ ದೂರವಿರಲು ಸಾಧ್ಯವಿಲ್ಲ ಮತ್ತು ಉಭಯ ದೇಶಗಳ ನಡುವಿನ ಎಲ್ಲ ಬಿಕಟ್ಟು ಪರಿಹಾರಕ್ಕೆ ಮಾತುಕತೆಗೆ ಮುಂದಾಗಬೇಕು ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಮಹಮ್ಮದ್‌ ಖುರೇಷಿ ಹೇಳಿದ್ದಾರೆ

‘ಭೌಗೋಳಿಕವಾಗಿ ಭಾರತ ಪಾಕಿಸ್ತಾನದೊಂದಿಗೆ ಸಾಮಾನ್ಯ ಗಡಿ, ವಾತಾವರಣ, ಸಂಸ್ಕೃತಿ, ಭಾಷೆ ಮತ್ತು ನದಿಗಳ ಮೂಲಕ ಸಂಪರ್ಕ ಹೊಂದಿದೆ’ ಎಂದು ಖುರೇಷಿ ಸಂವಾದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಪರಮಾಣು ಶಸ್ತ್ರಾಸ್ತ್ರ ಹೊಂದಿರುವ ಉಭಯ ರಾಷ್ಟ್ರಗಳೂ ಮಾತುಕತೆಯ ಮೂಲಕವೇ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಯುದ್ಧ ವಿನಾಶಕಾರಿಯಾಗಿದ್ದು, ಅದನ್ನು ಆಯ್ಕೆಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಬ್ರಿಟನ್‌ ಮತ್ತು ಜರ್ಮನಿ ನಡುವಿನ ಸಂಬಂಧವನ್ನು ನೆನಪಿಸಿಕೊಂಡ ಅವರು, ಅದು ಎರಡನೇ ವಿಶ್ವ ಮಹಾಯುದ್ಧಕ್ಕೆ ಕಾರಣವಾಯಿತು. ಆದರೆ ಇಂದು ಅವುಗಳು ಯೂರೋಪಿಯನ್‌ ಒಕ್ಕೂಟದ ಅಡಿಯಲ್ಲಿ ಸಂಪರ್ಕ ಹೊಂದಿದ್ದು, ಆರ್ಥಿಕ ಹಿತಾಸಕ್ತಿಯೊಂದಿಗೆ ಒಗ್ಗೂಡಿ ಕೆಲಸ ಮಾಡುತ್ತಿವೆ ಎಂದು ಉದಾಹರಣೆ ನೀಡಿದರು.

ಯುಎನ್‌ಐ ಕೆಎಸ್‌ವಿ ಕೆವಿಆರ್‌ 1854

There is no row at position 0.