Thursday, Mar 28 2024 | Time 22:21 Hrs(IST)
Karnataka Share

ನೂತನ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ: ಶಂಕರ್ ಗೆ ಪೌರಾಡಳಿತ, ನಾಗೇಶ್ ಗೆ ಸಣ್ಣ ಕೈಗಾರಿಕೆ

ನೂತನ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ: ಶಂಕರ್ ಗೆ ಪೌರಾಡಳಿತ, ನಾಗೇಶ್ ಗೆ ಸಣ್ಣ ಕೈಗಾರಿಕೆ
ನೂತನ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ: ಶಂಕರ್ ಗೆ ಪೌರಾಡಳಿತ, ನಾಗೇಶ್ ಗೆ ಸಣ್ಣ ಕೈಗಾರಿಕೆ

ಬೆಂಗಳೂರು, ಜೂ 24(ಯುಎನ್ಐ) ಮೈತ್ರಿ ಸಂಪುಟಕ್ಕೆ ಸೇರ್ಪಡೆಯಾಗಿದ್ದ ನೂತನ ಸಚಿವರಾದ ಆರ್ ಶಂಕರ್ ಅವರಿಗೆ ಪೌರಾಡಳಿತ ಹಾಗೂ ಎಚ್ ನಾಗೇಶ್ ಅವರಿಗೆ ಸಣ್ಣ ಕೈಗಾರಿಕೆ ಖಾತೆ ಹಂಚಿಕೆ ಮಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಶಿಫಾರಸ್ಸಿಗೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ

ಎಚ್ ನಾಗೇಶ್ ಅವರಿಗೆ ಸಣ್ಣ ಕೈಗಾರಿಕೆ ಖಾತೆ ಹಂಚಿಕೆ ಮಾಡಿದ್ದು, ಹಿಂದೆ ಗುಬ್ಬಿ ಶ್ರೀನಿವಾಸ್ ಅವರು ಈ ಖಾತೆ ಸಚಿವರಾಗಿದ್ದರು, ಸದ್ಯ ಅವರಿಂದ ಈ ಸಣ್ಣ ಕೈಗಾರಿಕೆಯನ್ನು ಹಿಂಪಡೆದಿರುವ ಮುಖ್ಯಮಂತ್ರಿಗಳು ನಾಗೇಶ್ ಅವರಿಗೆ ನೀಡಿದ್ದಾರೆ, ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಬಳಿ ಇದ್ದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಖಾತೆಯನ್ನ ಗುಬ್ಬಿ ಶ್ರೀನಿವಾಸ್ ಅವರಿಗೆ ನೀಡುವ ಮೂಲಕ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ

ಕುಂದಗೋಳ ಶಾಸಕ ಸಿ ಎಸ್ ಶಿವಳ್ಳಿ ಅವರ ನಿಧನದಿಂದ ತೆರವಾಗಿದ್ದ ಪೌರಾಡಳಿತ ಖಾತೆಗೆ ಎಚ್ ನಾಗೇಶ್ ಪಟ್ಟು ಹಿಡಿದಿದ್ದರು, ಇಬ್ಬರೂ ಪಕ್ಷೇತರ ಶಾಸಕರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಮೈತ್ರಿ ಪಕ್ಷಗಳಲ್ಲಿ ವ್ಯಾಪಕ ವಿರೋಧದ ನಡುವೆಯೂ ಶಂಕರ್ ಹಾಗೂ ನಾಗೇಶ್ ಅವರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು, ಪಕ್ಷೇತರರಿಗೆ ಸಂಪುಟದಲ್ಲಿ ಸ್ಥಾನ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಹಿರಿಯ ನಾಯಕರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು.

ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ 10 ದಿನಗಳ ಬಳಿಕ ಖಾತೆಗಳು ಹಂಚಿಕೆಯಾಗಿರುವುದು ವಿಶೇಷ. ಶಂಕರ್ ಹಾಗೂ ನಾಗೇಶ್ ಖಾತೆಗಾಗಿ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಕೆಪಿಸಿಸಿ ಅಧ್ಯಕ್ಷರು, ಸಚಿವ ಡಿ ಕೆ ಶಿವಕುಮಾರ್ ಬಳಿ ನಿರಂತರ ಲಾಭಿ ನಡೆಸಿದ್ದರು. ಕೊನೆಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅಳೆದೂ ತೂಗಿ ಖಾತೆ ಹಂಚಿಕೆ ಮಾಡಿದ್ದಾರೆ.

ಯುಎನ್ಐ ಎಸ್ಎಂಆರ್ ಎಎಚ್ 2000

There is no row at position 0.