Thursday, Apr 25 2024 | Time 21:10 Hrs(IST)
Parliament Share

ಲೋಕಸಭೆ; ರಾಷ್ಟ್ರಪತಿ ಭಾಷಣ ಮೇಲಿನ ವಂದನಾ ನಿರ್ಣಯ ಚರ್ಚೆ ಆರಂಭ; ಮೋದಿ ಸರ್ಕಾರದ ಸಾಧನೆ ಕೊಂಡಾಡಿದ ಸಾರಂಗಿ

ಲೋಕಸಭೆ;  ರಾಷ್ಟ್ರಪತಿ ಭಾಷಣ ಮೇಲಿನ  ವಂದನಾ ನಿರ್ಣಯ ಚರ್ಚೆ ಆರಂಭ;  ಮೋದಿ ಸರ್ಕಾರದ ಸಾಧನೆ  ಕೊಂಡಾಡಿದ ಸಾರಂಗಿ
ಲೋಕಸಭೆ; ರಾಷ್ಟ್ರಪತಿ ಭಾಷಣ ಮೇಲಿನ ವಂದನಾ ನಿರ್ಣಯ ಚರ್ಚೆ ಆರಂಭ; ಮೋದಿ ಸರ್ಕಾರದ ಸಾಧನೆ ಕೊಂಡಾಡಿದ ಸಾರಂಗಿ

ನವದೆಹಲಿ, ಜೂನ್ 24( ಯುಎನ್ಐ) ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಜೂನ್ 20 ರಂದು ಮಾಡಿದ್ದ ಭಾಷಣ ಮೇಲಿನ ವಂದನಾ ನಿರ್ಣಯ ಕುರಿತು ಲೋಕಸಭೆಯಲ್ಲಿ ಸೋಮವಾರ ಚರ್ಚೆ ಆರಂಭವಾಗಿದ್ದು, ಮೊದಲು ಚರ್ಚೆ ಆರಂಭಿಸಿದ ನೂತನ ಸಂಸದ ಪ್ರತಾಪ್ ಚಂದ್ರ ಸಾರಂಗಿ ನರೇಂದ್ರ ಮೋದಿ ಸರ್ಕಾರವನ್ನು ಕೊಂಡಾಡಿದರು.

ಪಶುಸಂಗೋಪನಾ ಖಾತೆ ರಾಜ್ಯ ಸಚಿವರೂ ಆಗಿರುವ ಪ್ರತಾಪ್ ಚಂದ್ರ ಸಾರಂಗಿ, ನರೇಂದ್ರ ಮೋದಿ ಸರ್ಕಾರದ ಸಾಧನೆಗಳನ್ನು ಮಾತುಗಾರಿಕೆಯ ಮೂಲಕ ವಿವರಿಸಿ, 2014 ರಿಂದ 2019 ನಡುವಣ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ಸಾಧನೆ ಹಾಗೂ ಜನಪರ ಆಡಳಿತವನ್ನು ದೇಶದ ಜನರು ಮತ್ತೆ ಅನುಮೋದಿಸಿ ಮತ್ತೊಮ್ಮೆ ಅಭೂತಪೂರ್ವ ಸ್ಪಷ್ಟ ಜನಾದೇಶ ನೀಡಿದ್ದಾರೆ ಎಂದರು.

ಸಂಸ್ಕೃತ ಶ್ಲೋಕಗಳು, ಬಂಗಾಳಿ ಹಾಗೂ ಹಿಂದಿಯ ನಾಣ್ನುಡಿಗಳನ್ನು ಯಥೇಚ್ಛವಾಗಿ ಉಲ್ಲೇಖಿಸಿ, ರಾಮಾಯಣದ ದೃಷ್ಟಾಂತಗಳನ್ನು ವಿವರಿಸಿ, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಒಳ್ಳೆಯ ಕಾರ್ಯಗಳನ್ನು ಪ್ರತಿಪಕ್ಷಗಳು ಅದರಲ್ಲೂ ಕಾಂಗ್ರೆಸ್ ಪ್ರಶಂಸಿಸಬೇಕು ಎಂದು ಸಲಹೆ ನೀಡಿದರು.

ಸಾರಂಗಿ ಭಾಷಣದ ವೇಳೆ ಸದನದಲ್ಲಿ ಹಾಜರಿದ್ದ ಪ್ರಧಾನಿ ಮೋದಿ ಹಲವು ಭಾರಿ ಅವರತ್ತ ನಗೆ ಬೀರಿ ಮೆಚ್ಚುಗೆ ಸೂಚಿಸಿದರು. 1971ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಸರ್ಕಾರ ಒಳ್ಳೆಯ ಕೆಲಸ ಮಾಡಿದಾಗ ಅಂದಿನ ದಿನಗಳಲ್ಲಿ ಪ್ರತಿಪಕ್ಷದಲ್ಲಿದ್ದ ಅಟಲ್ ಬಿಹಾರಿ ವಾಜಪೇಯಿ ಕೊಂಡಾಡಿದ್ದನ್ನು ಸ್ಮರಿಸಿದರು. ಸರ್ಕಾರದ ಒಳ್ಳೆಯ ಕೆಲಸಗಳನ್ನು ಪ್ರಶಂಸಿಸುವುದು ಪ್ರತಿಪಕ್ಷದ ಅವಿಭಾಜ್ಯ ಕರ್ತವ್ಯ ಆದರೆ, ಈಗಿನ ಪ್ರತಿಪಕ್ಷಗಳು ಅದನ್ನು ಒಮ್ಮೆಯೂ ಮಾಡುವುದಿಲ್ಲ ಏಕೆ ಎಂದು ಅಚ್ಚರಿಯಿಂದ ಸಾರಂಗಿ ಪ್ರಶ್ನಿಸಿದರು.

ಕನಿಷ್ಟ ಈಗಲಾದರೂ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಹೇಳುವ ಮೂಲಕ, ಚುನಾವಣೆಯಲ್ಲಿ ಹಿನಾಯ ಸೋಲು ಅನುಭವಿಸಿರುವ ಕಾಂಗ್ರೆಸ್ ಸದಸ್ಯರಿಗೆ ಸಲಹೆ ನೀಡುವ ಮೂಲಕ ತಿವಿದರು.

ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಸೋಲು ನಿಶ್ಚಿತ ಎಂಬುದನ್ನು ಮೊದಲೇ ಅರಿತು, ಸುರಕ್ಷಿತ ಕ್ಷೇತ್ರಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೇರಳಕ್ಕೆ ತೆರಳಿದರು ಎಂಬ ಸಾರಂಗಿ ಅವರ ಮಾತಿನ ತಿವಿತಕ್ಕೆ ಕಾಂಗ್ರೆಸ್ ಸದಸ್ಯರಿಂದ ತೀವ್ರ ಪ್ರತಿಕ್ರಿಯೆ ಕೇಳಿಬಂದವು

ತಮ್ಮ ಮೃದು ಮಾತಿನ ಮೂಲಕವೇ ಯುಪಿಎ ಆಡಳಿತದ 2 ಜಿ ತರಂಗಾಂತರದಂತಹ ಭ್ರಷ್ಟಾಚಾರ ಹಗರಣಗಳನ್ನು ಪ್ರಸ್ತಾಪಿಸಿದ ಸಾರಂಗಿ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ “ಆಕಸ್ಮಿಕ ಪ್ರಧಾನ ಮಂತ್ರಿ” ಯಾಗಿಯೇ ಹೆಚ್ಚು ಜನಪ್ರಿಯರು ಎಂದು ಲೇವಡಿ ಮಾಡಿದರು

ನಮ್ಮ ಪ್ರಧಾನಿ ನರೇಂದ್ರಮೋದಿ, ದೇಶದ ಪ್ರಧಾನ ಸೇವಕ ಎಂದು ಹೇಳಿದ್ದರಿಂದಲೇ ದೇಶದ ಜನರು ಬಿಜೆಪಿಗೆ ಮತಹಾಕಿದ್ದಾರೆ. ಸಭ್ ಕಾ ಸಾತ್, ಸಬ್ಕಾ ವಿಕಾಸ್ ಹಾಗೂ ಸಬ್ಕಾ ವಿಶ್ವಾಸ್ ಘೋಷಣೆಗಳಲ್ಲಿ ಭಾರತೀಯ ಪುರಾತನ ಚಂತನೆಯಾದ ಎಲ್ಲರನ್ನೂ ಒಳಗೊಳ್ಳವಿಕೆಯ ಸ್ಪೂರ್ತಿ ಮೇಳೈಸಿದೆ ಎಂದರು.

ಭಾಷಣದ ವೇಳೆ ಸಾರಂಗಿ, ತೃಣಮೂಲ ಕಾಂಗ್ರೆಸ್ ಸದಸ್ಯರೊಂದಿಗೆ ಹಲವು ಬಾರಿ ವಾಗ್ವಾದ ನಡೆಸಿದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಜೂನ್ 20 ರಂದು ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಮಾಡಿದ ಭಾಷಣ ಐತಿಹಾಸಿಕ ದಾಖಲೆ ಎಂದು ಸಾರಂಗಿ ಬಣ್ಣಿಸಿದರು. ಸಾರಂಗಿ ಅವರು ಮಂಡಿಸಿದ ವಂದನಾ ನಿರ್ಣಯವನ್ನು ಮತ್ತೊಬ್ಬ ಮಹಾರಾಷ್ಟ್ರ ನಂದೂರಬಾರ್ ಲೋಕಸಭಾ ಕ್ಷೇತ್ರದ ಸಂಸದ ಹೀನಾ ಗವಿಟ್ ಅನುಮೋದಿಸಿದರು.

ಯುಎನ್ಐ ಕೆವಿಆರ್ ಎಸ್ ಎಲ್ ಎಸ್ 1538

There is no row at position 0.