Thursday, Mar 28 2024 | Time 19:09 Hrs(IST)
Entertainment Share

'ಹೇರಾ ಫೇರಿ- 3' ನಿರ್ದೇಶಿಸಲಿರುವ ಪ್ರಿಯದರ್ಶನ್

ಮುಂಬಯಿ, ಏ 20 (ಯುಎನ್ಐ) ಹಿಂದಿಯ ಸೂಪರ್ ಹಿಟ್ ಹಾಸ್ಯಮಯ ಚಿತ್ರ 'ಹೇರಾ ಫೇರಿ' ಮೂರನೇ ಅವತರಣಿಕೆ ಹೊರತರಲು ಬಾಲಿವುಡ್ ನಿರ್ದೇಶಕ ಪ್ರಿಯದರ್ಶನ್ ನಿಶ್ಚಯಿಸಿದ್ದಾರೆ.
2000ರಲ್ಲಿ ಬಿಡುಗಡೆಗೊಂಡ 'ಹೇರಾ ಫೇರಿ' ಚಿತ್ರದಲ್ಲಿ ನಟರಾದ ಅಕ್ಷಯ್ ಕುಮಾರ್, ಸುನೀಲ್ ಶೆಟ್ಟಿ ಹಾಗೂ ಪರೇಶ್ ರಾವಲ್ ಅಭಿನಯಿಸಿ ಪ್ರೇಕ್ಷಕರನ್ನು ಹೊಟ್ಟೆಹುಣ್ಣಾಗುವಂತೆ ನಗಿಸುವಲ್ಲಿ ಯಶಸ್ವಿಯಾಗಿದ್ದರು.
'ಹೇರಾ ಫೇರಿ' ಎರಡನೇ ಅವತರಣಿಕೆಯನ್ನು ನೀರಜ್ ವೋರಾ ನಿರ್ದೇಶಿಸಿದ್ದರು. ಈ ಹಿಂದೆ ಇದೇ ಚಿತ್ರದ ಮೂರನೇ ಅವತರಣಿಕೆ ಇಂದ್ರ ಕುಮಾರ್ ನಿರ್ದೇಶಿಸಲಿದ್ದಾರೆಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಕಾರಣಾಂತರಗಳಿಂದ ಅವರು ಚಿತ್ರದಿಂದ ದೂರಸರದಿದ್ದಾರಂತೆ.
ಈಗ ಸಿದ್ಧಗೊಳ್ಳುತ್ತಿರುವ 'ಹೇರಾ ಫೇರಿ' ಚಿತ್ರದಲ್ಲಿ ಮೂವರು ನಟರು ಸ್ವಲ್ಪ ವಯಸ್ಸಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಅಕ್ಷಯ್ ಕುಮಾರ್ ಹಾಗೂ ಸುನೀಲ್ ಶೆಟ್ಟಿ ನಿರ್ಮಾಪಕರೊಂದಿಗೆ ಮಾತುಕತೆ ನಡೆಸಿದ್ದಾರೆಂದು ನಿರ್ದೇಶಕ ಪ್ರಿಯದರ್ಶನ್ ಸ್ಪಷ್ಟಪಡಿಸಿದ್ದಾರೆ.
ಸದ್ಯ ಮಲೆಯಾಳಂ 'ಮರ್ಕರ್: ದಿ ಲಯನ್ ಆಫ್ ಆರೇಬಿಯನ್ ಸಿ' ಚಿತ್ರದಲ್ಲಿ ಪ್ರಿಯದರ್ಶನ ತೊಡಗಿದ್ದು, ನಂತರವೇ 'ಹೇರಾ ಫೇರಿ' ಮೂರನೇ ಅವತರಣಿಕೆಯತ್ತ ಗಮನ ಹರಿಸಲಿದ್ದಾರಂತೆ.
ಯುಎನ್ಐ ಪಿಕೆ ಎಎಸ್ 1548
There is no row at position 0.