Wednesday, Apr 24 2024 | Time 13:30 Hrs(IST)
Special Share

ಅಮೇಥಿ,ರಾಯಬರೇಲಿಯಲ್ಲಿ ಸೋಮವಾರ ಗಾಂಧಿ ಕುಟುಂಬದ ಚುನಾವಣಾ ಪ್ರಚಾರ

ಅಮೇಥಿ,ಏಪ್ರಿಲ್ 20( ಯುಎನ್ಐ)- ಪ್ರತಿಷ್ಠಿತ ಲೋಕಸಭಾ ಕ್ಷೇತ್ರಗಳನ್ನು ತನ್ನ ತೆಕ್ಕೆಯಲ್ಲೇ ಉಳಿಸಿಕೊಳ್ಳಲು ಗಾಂಧಿ ಕುಟುಂಬ ಸೋಮವಾರ ತಮ್ಮ ಚುನಾವಣಾ ಕಾಂಗ್ರೆಸ್ ಪ್ರಚಾರ ಆರಂಭಿಸಲಿದ್ದು ಅಂದು ಇಡೀ ಗಾಂಧಿ ಕುಟುಂಬದ ಸದಸ್ಯರು ಅಮೇಥಿ ಹಾಗೂ ರಾಯಬರೇಲಿಯ ವಿವಿಧ ಸ್ಥಳಗಳಲ್ಲಿ ಮಿಂಚಿನ ಸಂಚಾರ ನಡೆಸಲಿದ್ದಾರೆ.

ಈ ಎರಡೂ ಲೋಕಸಭಾ ಕ್ಷೇತ್ರಗಳಿಗೆ ಮೇ 6 ರಂದು ಮತದಾನ ನಡೆಯಲಿದೆ

.
ಏಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ವಾದ್ರಾ ಗಾಂಧಿ ಸೋಮವಾರ ಬೆಳಗ್ಗೆ ರಾಯಬರೇಲಿ ತಲುಪಲಿದ್ದಾರೆ ಎಂದು ಮೂಲಗಳು ಶನಿವಾರ ದೃಢಪಡಿಸಲಿವೆ.

ರಾಹುಲ್ ಗಾಂಧಿ ಅವರು ಅಮೇಥಿಯ ಕಡೆ ಹೊರಡಲಿದ್ದು, ಸೋನಿಯಾ ಗಾಂಧಿ ಹಾಗೂ ಪುತ್ರಿ ಪ್ರಿಯಾಂಕಾ ಗಾಂಧಿ ರಾಯಬರೇಲಿಯಲೇ ಉಳಿಯಲಿದ್ದಾರೆ. ಇಬ್ಬರೂ, ರಾಯಬರೇಲಿ ನಗರ ಪ್ರದೇಶದಲ್ಲಿ ಪ್ರತ್ಯೇಕ ಸಭೆಗಳನ್ನು ನಡೆಸಿ, ಮುಂದಿನ ಪ್ರಚಾರ ಕಾರ್ಯತಂತ್ರ ಕುರಿತು ಚರ್ಚಿಸಲಿದ್ದಾರೆ.
ಸೋನಿಯಾ ಗಾಂಧಿ ಅವರು ಕೆಲವು ಗ್ರಾಮಗಳಿಗೆ ಭೇಟಿ ನೀಡಿ, ಗ್ರಾಮೀಣ ಜನರೊಂದಿಗೆ ಸಂವಾದ ನಡೆಸಿದೀ ಬಾರಿ ದಾಖಲೆಯ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಮನವಿ ಮಾಡಲಿದ್ದಾರೆಂದು ಮೂಲಗಳು ತಿಳಿಸಿವೆ.

ಸೋನಿಯಾಗಾಂಧಿ ಈ ಬಾರಿ ತಮ್ಮ ಪಕ್ಷದಲ್ಲಿದ್ದು, ಇತ್ತೀಚಿಗಷ್ಟೇ ಬಿಜೆಪಿ ಸೇರಿರುವ ದಿನೇಶ್ ಪ್ರತಾಪ್ ಸಿಂಗ್ ಅವರನ್ನು ಎದುರಿಸಬೇಕಾಗಿದೆ.

ರಾಹುಲ್ ಗಾಂಧಿ ಸೋಮವಾರ ತಮ್ಮ ಸಂಸತ್ ಕ್ಷೇತ್ರದಲ್ಲಿ ರೋಡ್ ಶೋ ನಡೆಸಲಿದ್ದಾರೆ. ತಮ್ಮ ವಾಸ್ತವ್ಯದ ವೇಳೆ ತಿಲೊಯ್ ಹಾಗೂ ಸಲೋನ್ ವಿಧಾನಸಭಾ ಕ್ಷೇತ್ರಗಳಲ್ಲಿ ರೋಡ್ ಶೋ ನಡೆಸಲಿದ್ದಾರೆ ಎಂದು ಅಮೇಥಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಅನಿಲ್ ಸಿಂಗ್ ಹೇಳಿದ್ದಾರೆ.
ಯುಎನ್ಐ ಕೆವಿಆರ್ ಎಸ್ ಎಲ್ ಎಸ್ 2120


ರಾಹುಲ್ ಗಾಂಧಿ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಪುನರಾಯ್ಕೆ ಬಯಸಿದ್ದು, ಬಿಜೆಪಿಯ ಸ್ಮೃತಿ ಇರಾನಿ ಅವರನ್ನು ಕಣಕ್ಕಿಳಿಸಿದೆ.
ಯುಎನ್ಐ ಕೆವಿಆರ್ ಎಸ್ ಎಲ್ ಎಸ್ 2120
There is no row at position 0.