Tuesday, Apr 23 2024 | Time 19:18 Hrs(IST)
Sports Share

ಇಂಗ್ಲೆಂಡ್ ತಂಡವನ್ನು ನೋಡಿ ತಿಳಿದುಕೊಳ್ಳಿ: ಕಾಲಿಸ್

ಲಂಡನ್, ಜೂನ್ 24 (ಯುಎನ್ಐ)- ವಿಶ್ವಕಪ್ ಸೋಲಿನ ನೋವನ್ನು ಮರೆತು, ಉತ್ತಮ ತಂಡ ಕಟ್ಟುವತ್ತ ದೃಷ್ಟಿ ನೆಟ್ಟು, ಇಂಗ್ಲೆಂಡ್ ತಂಡವನ್ನು ನೋಡಿ ಕಲಿತಿಕೊಳ್ಳಿ ಎಂದು ದಕ್ಷಿಣ ಆಫ್ರಿಕಾ ತಂಡಕ್ಕೆ ಜಾಕ್ ಕಾಲಿಸ್ ಕಿವಿ ಮಾತು ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನವನ್ನು ನೀಡುವಲ್ಲಿ ವಿಫಲವಾಗಿದೆ. ತಂಡದಲ್ಲಿ ಒಮ್ಮೆಲೆ ಎಲ್ಲ ಬದಲಾವಣೆ ತರಲು ಸಾಧ್ಯವಿಲ್ಲ. ಇಂಗ್ಲೆಂಡ್ ತಂಡ ನೋಡಿ ತಿಳಿದುಕೊಳ್ಳಿ. 2015ರಲ್ಲಿ ಆಂಗ್ಲರು ನೀಡಿದ ಪ್ರದರ್ಶನ ಹಾಗೂ ಸದ್ಯ ನೀಡುತ್ತಿರುವ ಪ್ರದರ್ಶನವನ್ನು ನೋಡಿ ಕಲಿಯಬೇಕು. ಆಸ್ಟ್ರೇಲಿಯ, ನ್ಯೂಜಿಲೆಂಡ್ ನೆಲದಲ್ಲಿ ಸೋತ ಬಳಿಕ ತಂಡ, ಮಾನಸಿಕ ಸಮತೋಲನದ ಮೇಲೆ ಕೆಲಸ ಮಾಡಿತು. ಇದರ ಪರಿಣಾಮವೇ ಇಂದು ತಂಡ ಬಲಿಷ್ಠಗೊಂಡಿದೆ ಎಂದು ಕಾಲಿಸ್ ತಿಳಿಸಿದ್ದಾರೆ.

ಮನುಷ್ಯ ತಪ್ಪುಗಳಿಂದ ಪಾಠ ಕಲಿಯಲು ಸಾಧ್ಯ. ನಾನು ಸಹ ನನ್ನ ತಪ್ಪುಗಳನ್ನು ತಿದ್ದಿಕೊಂಡು ದೊಡ್ಡ ಹಂತ ತಲುಪಲು ಸಾಧ್ಯವಾಯಿತು. ಯೋಜನೆಗೆ ಅನುಗುಣವಾಗಿ ಆಡಿ ಫಲ ಕಂಡಿದ್ದೇನೆ ಎಂದಿದ್ದಾರೆ.

ತಂಡ ಪ್ರತಿ ಆಟಗಾರನ ಮೇಲೆ ವಿಶ್ವಾಸ ಇಡಬೇಕು. ಯುವ ಆಟಗಾರರನ್ನು ದಕ್ಷಿಣ ಆಫ್ರಿಕಾ ತಂಡ ಹೊಂದಿದೆ. ಇಂತಹ ಸ್ಟಾರ್ ಆಟಗಾರರನ್ನು ಸೇರಿಸಿಕೊಂಡ ದೊಡ್ಡ ಗೆಲುವಿನ ಸೌಧ ಕಟ್ಟಲು ಸಾಧ್ಯ ಎಂದಿದ್ದಾರೆ.

ನಾಲ್ಕು ವರ್ಷದ ಹಿಂದೆ ಇಂಗ್ಲೆಂಡ್ ಕಳಪೆ ಪ್ರದರ್ಶನ ನೀಡಿತ್ತು. ಆದರೆ, ಆ ಪ್ರದರ್ಶನದಲ್ಲಿ ಬದಲಾವಣೆ ತಂದು ನಂಬರ್ ಒನ್ ಪಟ್ಟ ಅಲಂಕರಿಸಿದ್ದಾರೆ ಎಂದು ಕಾಲಿಸ್ ಹೇಳಿದ್ದಾರೆ.
ಯುಎನ್ಐ ವಿಎನ್ಎಲ್ ಕೆಎಸ್ವಿ 2218
There is no row at position 0.