Thursday, Apr 25 2024 | Time 07:29 Hrs(IST)
International Share

ಉತ್ತರ ಇರಾಕ್ ನಲ್ಲಿ ಸೇನಾ ಕಾರ್ಯಾಚರಣೆ: 14 ಐಎಸ್ ಉಗ್ರರ ಹತ್ಯೆ

ಉತ್ತರ ಇರಾಕ್ ನಲ್ಲಿ  ಸೇನಾ ಕಾರ್ಯಾಚರಣೆ: 14 ಐಎಸ್ ಉಗ್ರರ ಹತ್ಯೆ
ಉತ್ತರ ಇರಾಕ್ ನಲ್ಲಿ ಸೇನಾ ಕಾರ್ಯಾಚರಣೆ: 14 ಐಎಸ್ ಉಗ್ರರ ಹತ್ಯೆ

ಬಾಗ್ದಾದ್, ಜೂನ್ 24 (ಕ್ಸಿನ್ಹುವಾ) ಇರಾಕ್ ಉತ್ತರ ಪ್ರಾಂತ್ಯದ ಕಿರ್ಕುಕ್ ನಲ್ಲಿ ಅಮೆರಿಕ ಹಾಗೂ ಇರಾಕಿ ಭಯೋತ್ಪಾದನಾ ನಿಗ್ರಹದಳ ಜಂಟಿಯಾಗಿ ಸೋಮವಾರ ನಡೆಸಿದ ಸೇನಾ ಕಾರ್ಯಾಚರಣೆಯಲ್ಲಿ 14 ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಸೇನೆ ತಿಳಿಸಿದೆ.

ಅಂತಾರಾಷ್ಟ್ರೀಯ ಮಿತ್ರ ಪಡೆಯ ಇರಾಕಿನ ಭಯೋತ್ಪಾದನಾ ನಿಗ್ರಹ ಪಡೆ ಪ್ರಾಂತೀಯ ರಾಜಧಾನಿ ಕಿರ್ಕುಕ್‌ನ ದಕ್ಷಿಣ ಭಾಗದಲ್ಲಿ, ಬಾಗ್ದಾದ್‌ನಿಂದ 250 ಕಿ.ಮೀ ದೂರದಲ್ಲಿರುವ ಐಎಸ್ ನೆಲೆಗಳ ಮೇಲೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಮಾಧ್ಯಮ ಕಚೇರಿ ಪ್ರಕಟಣೆ ತಿಳಿಸಿದೆ.



ಕಾರ್ಯಾಚರಣೆಯ ಪರಿಣಾಮವಾಗಿ 14 ಐಎಸ್ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿದ್ದರೂ ಹೆಚ್ಚಿನ ವಿವರ ಬಹಿರಂಗ ಪಡಿಸಿಲ್ಲ.

2017 ರ ಕೊನೆಯಲ್ಲಿ ಇರಾಕಿ ಭದ್ರತಾ ಪಡೆಗಳು ದೇಶಾದ್ಯಂತ ಉಗ್ರಗಾಮಿ ನೆಲೆಗಳನ್ನು ಸೆದೆಬಡಿದ ಮೇಲೆ ಇರಾಕ್‌ನಲ್ಲಿ ಭದ್ರತಾ ಪರಿಸ್ಥಿತಿ ಕ್ರಮೇಣ ಸುಧಾರಿಸಿದೆ.

ಆದಾಗ್ಯೂ, ಮಧ್ಯ ಮತ್ತು ಉತ್ತರ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಪುನರಾವರ್ತಿತ ಸೇನಾ ಕಾರ್ಯಾಚರಣೆ ಹೊರತಾಗಿಯೂ, ಕೆಲವು ಐಎಸ್ ಉಗ್ರರು ಅಲ್ಲಿ ಇನ್ನೂ ಸಕ್ರಿಯರಾಗಿದ್ದು, ಭದ್ರತಾ ಪಡೆ ಮತ್ತು ನಾಗರಿಕರನ್ನು ಗುರಿಯಾಗಿಟ್ಟುಕೊಂಡು ಆಗಾಗ್ಗೆ ಗೆರಿಲ್ಲಾ ದಾಳಿ ನಡೆಸುತ್ತಿದ್ದಾರೆ.

ಯುಎನ್ಐ ಕೆಎಸ್ಆರ್ ಎಎಚ್ 1605

There is no row at position 0.