Friday, Mar 29 2024 | Time 17:57 Hrs(IST)
Sports Share

ಏಷ್ಯಾ ಸ್ನೂಕರ್ ಚಾಂಪಿಯನ್‍ಶಿಪ್: ಪಂಕಜ್ ಅಡ್ವಾಣಿ ಮೇಲೆ ಕಣ್ಣು

ಬೆಂಗಳೂರು, ಏ 20 (ಯುಎನ್ಐ) ಭಾರತದ ಸ್ಟಾರ್ ಸ್ನೂಕರ್ ಆಟಗಾರ ಪಂಕಜ್ ಅಡ್ವಾಣಿ ಅವರು ಇಲ್ಲಿ ಏಪ್ರಿಲ್ 22 ರಿಂದ 25 ರವರೆಗೆ ನಡೆಯಲಿರುವ ಏಷ್ಯಾ ಸ್ನೂಕರ್ ಟೂರ್ ನ ಮೂರನೇ ಚರಣದಲ್ಲಿ ಆಡಲಿದ್ದು, ಎಲ್ಲರ ಚಿತ್ತ ಕದ್ದಿದ್ದಾರೆ.
ತವರಿನಲ್ಲಿ ನಡೆಯುತ್ತಿರುವ ಸ್ಪರ್ಧೆಯಲ್ಲಿ ಪಂಕಜ್ ಭಾರತದ ಎಂಟು ಜನರ ತಂಡವನ್ನು ಮುನ್ನಡೆಸಲಿದ್ದು, ಇರಾನ್, ಸಿರಿಯಾ, ಥಾಯ್ಲೆಂಡ್, ಹಾಂಕಾಂಗ್, ಕತಾರ್, ಮಲೇಷ್ಯಾ, ವೇಲ್ಸ್ ಹಾಗೂ ಚೀನಾದ ಆಟಗಾರರು ಭಾಗವಹಿಸಲಿದ್ದಾರೆ.
ಧೋಹಾದಲ್ಲಿ ನಡೆದಿದ್ದ ಮೊದಲ ಚರಣದಲ್ಲಿ ಭಾಗವಹಿಸಿದ್ದ ಪಾಕಿಸ್ಥಾನದ ಮೊಹಮ್ಮದ್ ಬಿಲಾಲ್ ಈ ಬಾರಿ ಕಾಣಿಸಿಕೊಳ್ಳುವುದಿಲ್ಲ.
ಭಾರತದ ಪರ ಅಡ್ವಾಣಿ ಸೇರಿದಂತೆ ಮನನ್ ಚಂದ್ರ, ಸೌರವ್ ಕೊಠಾರಿ ಅವರು ತಮ್ಮ ಸಾಮರ್ಥ್ಯ ಪ್ರದರ್ಶಿಸಲಿದ್ದಾರೆ. ಇರಾನ್ ನಿಂದ ಅಮೀರ್ ಸರ್ಕೋಶ್, ಇಶಾನ್ ಎಚ್., ಮಲೇಷ್ಯಾದಿಂದ ಮೂರು, ಕತಾರದಿಂದ ಮೊಹಸಿನ್ ಬಿ., ಹಾಗೂ ಅಹ್ಮದ್, ಆಬಿಲ್ ಭಾಗವಹಿಸಲಿದ್ದಾರೆ.
ಟೂರ್ನಿಯ ಸೆಮಿಫೈನಲ್ಸ್ ಹಾಗೂ ಫೈನಲ್ ಪಂದ್ಯಗಳು 25 ರಂದು ನಡೆಯಲಿವೆ.
ಯುಎನ್ಐ ವಿಎನ್ಎಲ್ ಕೆಎಸ್ವಿ 2130
There is no row at position 0.