Saturday, Apr 20 2024 | Time 14:49 Hrs(IST)
Sports Share

ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‍ಶಿಪ್: ಶಿವ ಶುಭಾರಂಭ

ನವದೆಹಲಿ, ಏ 20 (ಯುಎನ್ಐ)- ಭಾರತದ ಖ್ಯಾತ ಬಾಕ್ಸರ್ ಶಿವ ಥಾಪ (60ಕೆ.ಜಿ) ಬ್ಯಾಂಕಾಕ್ ನಲ್ಲಿ ನಡೆಯುತ್ತಿರುವ ಏಷ್ಯನ್ ಚಾಂಪಿಯನ್‍ಶಿಪ್‍ನ ಪ್ರೀ ಕ್ವಾರ್ಟರ್ ಫೈನಲ್ಸ್ ಗೆ ಅರ್ಹತೆ ಪಡೆದಿದ್ದು, ದೀಪಕ್ 49ಕೆ.ಜಿ ವಿಭಾಗದಲ್ಲಿ ಎಂಟರ ಘಟ್ಟಕ್ಕೆ ಪ್ರವೇಶಿಸಿದ್ದಾರೆ.
ಟೂರ್ನಿಯ ಎರಡನೇ ದಿನವಾದ ಶನಿವಾರ ಶಿವ 4-1 ರಿಂದ ಕೊರಿಯಾದ ಕಿಮ್ ವೊನಹೊ ವಿರುದ್ಧ ಜಯ ಸಾಧಿಸಿದರು. ಈ ಮೊದಲು ಇವರು 2013ರಲ್ಲಿ ಬಂಗಾರ, 2015ರಲ್ಲಿ ಕಂಚು, 2017ರಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಮುಂದಿನ ಸುತ್ತಿನ ಕಾದಾಟದಲ್ಲಿ ಶಿವ ಕರ್ಗಿಸ್ಥಾನದ ಆಟಗಾರನ ವಿರುದ್ಧ ಸೆಣಸಾಟ ನಡೆಸಲಿದ್ದಾರೆ.
2018ರ ಚಾಂಪಿಯನ್‍ಶಿಪ್ ನಲ್ಲಿ ಕಂಚು ಗೆದ್ದಿದ್ದ ಲೋವ್ಲಿನಾ ಬೋರ್ಗೆಹೈನ್ 5-0 ಯಿಂದ ವಿಯೇಟ್ನಾಮ್ ನ ತ್ರಾನ್ ಥಿಲೀನಾ ಅವರನ್ನು ಮಣಿಸಿದರು. ಸೋಮವಾರ ನಡೆಯಲಿರುವ ಸ್ಪರ್ಧೆಯಲ್ಲಿ ಭಾರತದ ಆಟಗಾರ್ತಿ ಚೀನಾದ ಬಾಕ್ಸ್ ರ ವಿರುದ್ಧ ಹೋರಾಡಲಿದ್ದಾರೆ.
ರಾಷ್ಟ್ರೀಯ ಚಾಂಪಿಯನ್ ದೀಪಕ್ ಅವರು 5-0ಯಿಂದ ಶ್ರೀಲಂಕಾದ ಮುತುನಕಾ ಪೆಡಿ ಗೆಡಾರ್ ವಿರುದ್ಧ ಜಯ ಸಾಧಿಸಿದರು.
ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಅಮಿತ್ ಪಂಘಲ್ (52 ಕೆ.ಜಿ) ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇವರು ಚೈನಿ ಥೈಪೆಯ ಆಟಗಾರನ ಸವಾಲು ಎದುರಿಸಲಿದ್ದಾರೆ. ಆಶೀಷ್ (89ಕೆ.ಜಿ), ಬ್ರಿಜೇಶ್ ಯಾದವ್ (81ಕೆ.ಜಿ), ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ.

ಯುಎನ್ಐ ವಿಎನ್ಎಲ್ ಕೆಎಸ್ವಿ 2150
There is no row at position 0.