Thursday, Apr 25 2024 | Time 23:29 Hrs(IST)
Entertainment Share

ಚುಲ್ ಬುಲ್ ಪಾಂಡೆ ಪಾತ್ರದಲ್ಲಿ ಜೀವಿಸುತ್ತಿರುವ ಸಲ್ಮಾನ್ : ಅರ್ಬಾಜ್

ಮುಂಬಯಿ, ಏ 20 (ಯುಎನ್ಐ) ಬಾಲಿವುಡ್ ದಬಾಂಗ್ ಸ್ಟಾರ್ ಸಲ್ಮಾನ್ ಖಾನ್, ಚುಲ್ ಬುಲ್ ಪಾಂಡೆ ಪಾತ್ರದಲ್ಲಿ ಜೀವಿಸುತ್ತಿದ್ದಾರೆಂದು ಸಲ್ಮಾನ್ ಸಹೋದರ ಅರ್ಬಾಜ್ ಖಾನ್ ಅಭಿಪ್ರಾಯ ಪಟ್ಟಿದ್ದಾರೆ.
ನೃತ್ಯ ಸಂಯೋಜಕ ಪ್ರಭು ದೇವ್ ನಿರ್ದೇಶನದಲ್ಲಿ ಸೂಪರ್ ಹಿಟ್ ದಬಾಂಗ್ ಚಿತ್ರದ ಮೂರನೇ ಅವತರಣಿಕೆ ಸಿದ್ಧಗೊಳ್ಳುತ್ತಿದೆ. 2010ರಲ್ಲಿ 'ದಬಾಂಗ್' ಹಾಗೂ 2012ರಲ್ಲಿ 'ದಬಾಂಗ್-2' ಚಿತ್ರ ಬಿಡುಗಡೆಗೊಂಡಿತು.
ಸುಮಾರು ಏಳು ವರ್ಷದ ನಂತರ ಮತ್ತೊಮ್ಮೆ ಸಲ್ಲೂ, ಚುಲ್ ಬುಲ್ ಪಾಂಡೆ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದು, ದಬಾಂಗ್-3 ಚಿತ್ರೀಕರಣದಲ್ಲಿ ತೊಡಗಿದ್ದಾರೆ.
ಈ ಕುರಿತು ಮಾತನಾಡಿದ ಅರ್ಬಾಜ್ ಖಾನ್, ಸಲ್ಮಾನ್ ಚುಲ್ ಬುಲ್ ಪಾಂಡೆ ಪಾತ್ರದಲ್ಲಿ ಜೀವಿಸುತ್ತಿದ್ದಾರೆ. ದಬಾಂಗ್-3 ಮೊದಲ ದಿನ ಚಿತ್ರೀಕರಣ ಮಾಡುತ್ತಿದ್ದಾಗ, ಸಲ್ಮಾನ್ ನೋಡಿ ಆಶ್ಚರ್ಯಚಕಿತನಾಗಿದ್ದೆ ಎಂದರು.
'ದಬಾಂಗ್-2' ಚಿತ್ರದ ನಂತರ ಸಲ್ಮಾನ್ ಅನೇಕ ಚಿತ್ರಗಳಲ್ಲಿ ವಿಭಿನ್ನ ಪಾತ್ರ ದಲ್ಲಿ ನಟಿಸಿದ್ದಾರೆ. ದಬಾಂಗ್-2 ಚಿತ್ರ ಆಗಿ ಏಳು ವರ್ಷದ ನಂತರ ಮತ್ತೊಮ್ಮೆ ಸಲ್ಮಾನ್ ಮೀಸೆ ಹೊತ್ತು ಮೊದಲ ಶಾಟ್ ನೀಡಿದಾಗ ಆಶ್ಚರ್ಯಗೊಂಡಿದೆ. ಏಕೆಂದರೆ ಚುಲ್ ಬುಲ್ ಪಾಂಡೆ ವ್ಯಕ್ತಿತ್ವದಲ್ಲಿ ಮಗ್ನನಾಗಲು ಅವರು ತುಂಬಾ ಹೊತ್ತು ತೆಗೆದುಕೊಳ್ಳಲಿಲ್ಲ. ಅವರ ಭಾಷಾ ಶೈಲಿಯಲ್ಲಿಯೂ ಎಳ್ಳಷ್ಟು ಬದಲಾವಣೆ ಆಗಿರಲಿಲ್ಲ ಎಂದಿದ್ದಾರೆ.
ಚಿತ್ರದ ಮೊದಲ ಭಾಗದಲ್ಲಿರುವಂತೆ ನಟಿ ಸೋನಾಕ್ಷಿ ಸಿನ್ಹಾ, ಇಲ್ಲಿಯೂ ಸಲ್ಮಾನ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ಮುಂದಿನ ವರ್ಷ 'ರಂಜಾನ್ ಹಬ್ಬದಲ್ಲಿ ಚಿತ್ರ ಬಿಡುಗಡೆಗೊಳ್ಳಲಿದೆ.
ಯುಎನ್ಐ ಪಿಕೆ ಎಸ್ಎಚ್ 1913
There is no row at position 0.