Friday, Mar 29 2024 | Time 01:20 Hrs(IST)
Sports Share

ಡೆಲ್ಲಿ ಎದುರು ಡುಮ್ಕಿ ಹೊಡೆದ ಕಿಂಗ್ಸ್

ನವದೆಹಲಿ, ಏ 20 (ಯುಎನ್ಐ) ಸಂಘಟಿತ ಆಟದ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ ಐದು ವಿಕೆಟ್ ಗಳಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಮಣಿಸಿ, ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.
ಮೊದಲು ಬ್ಯಾಟ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ 20 ಓವರ್ ಗೆ 7 ವಿಕೆಟ್ ಗೆ 163 ರನ್ ಕಲೆ ಹಾಕಿತು. ಇದಕ್ಕುತ್ತರಾಗಿ ಬ್ಯಾಟ್ ಮಾಡಿದ ಡೆಲ್ಲಿ ಇನ್ನು ಒಂದು ಎಸೆತ ಬಾಕಿ ಇರುವಂತೆ 5 ವಿಕೆಟ್ ಗೆ 170 ರನ್ ಸಿಡಿಸಿ ಜಯ ಸಾಧಿಸಿತು.
ಡೆಲ್ಲಿ ಪರ ಇನ್ನಿಂಗ್ಸ್ ಆರಂಭಿಸಿದ ಶಿಖರ್ ಧವನ್ ಹಾಗೂ ಪೃಥ್ವಿ ಶಾ ತಂಡಕ್ಕೆ ಉತ್ತಮ ಆರಂಭ ನೀಡುವ ವಿಶ್ವಾಸ ಹೊಂದಿದ್ದರು. 3.1 ಓವರ್ ನಲ್ಲಿ ಇಲ್ಲದ ರನ್ ಕದಿಯಲು ಹೋಗಿ ಪೃಥ್ವಿ ಶಾ ಔಟಾದರು.
ಎರಡನೇ ವಿಕೆಟ್ ಗೆ ಶಿಖರ್ ಧವನ್ ಹಾಗೂ ಶ್ರೇಯಸ್ ಅಯ್ಯರ್ ತಂಡಕ್ಕೆ ಆಧಾರಾವಾದರು. ಈ ಜೋಡಿ ಪಂಜಾಬ್ ಬೌಲರ್ ಗಳನ್ನು ದಂಡಿಸುತ್ತಾ ಸಾಗಿತು. ಅಲ್ಲದೆ ಪಂಜಾಬ್ ತಂಡದ ಗೆಲುವಿನ ಆಸೆಯನ್ನು ಹಾಳು ಮಾಡಿತು. ಈ ಜೋಡಿ 64 ಎಸೆತಗಳಲ್ಲಿ 92 ರನ್ ಸಿಡಿಸಿತು.
ಶಿಖರ್ ಧವನ್ 41 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಸೇರಿದಂತೆ 52 ರನ್ ಗಳಿಗೆ ವಿಕೆಟ್ ಒಪ್ಪಿಸಿದರು.
ಡೆಲ್ಲಿ ತಂಡದ ಮಧ್ಯಮ ಕ್ರಮಾಂಕದ ಕಾಲಿನ್ ಇಂಗ್ರಾಮ್ 19 ರನ್ ಗಳಿಗೆ ಔಟಾದರು. ಅಕ್ಷರ್ ಪಟೇಲ್ ಇಲ್ಲದ ರನ್ ಕದಿಯಲು ಹೋಗಿ ಪೆವಲಿಯನ್ ಸೇರಿದರು.

ಶ್ರೇಯಸ್ ಅಯ್ಯರ್ 49 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸೇರಿದಂತೆ 58 ರನ್ ಬಾರಿಸಿ ಅಜೇಯರಾಗುಳಿದರು.
ಮೊದಲ ಬ್ಯಾಟಿಂಗ್ ಮಾಡಿದ ಪಂಜಾಬ್ನ ಕೆ.ಎಲ್ ರಾಹುಲ್ (12) ಅವರನ್ನು ಬೇಗನೇ ಪೆವಲಿಯನ್ ಗೆ ಅಟ್ಟುವಲ್ಲಿ ಲಮಿಚಾನೆ ಸಫಲರಾದರು.
ಮಧ್ಯಮ ಕ್ರಮಾಂಕದಲ್ಲಿ ಮಾಯಾಂಕ್ ಅಗರ್ ವಾಲ್ (2), ಡೇವಿಡ್ ಮಿಲ್ಲರ್ (7), ರನ್ ಬರ ಅನುಭವಿಸಿದರು.
4ನೇ ವಿಕೆಟ್ಗೆ ಆರಂಭಿಕ ಕ್ರಿಸ್ ಗೇಲ್ ಅವರನ್ನು ಸೇರಿಕೊಂಡ ಮಂದೀಪ್ ಸಿಂಗ್ ತಂಡಕ್ಕೆ ಆಸರೆ ಆದರು. ಈ ಜೋಡಿ ತಂಡಕ್ಕೆ 45 ರನ್ ಕಾಣಿಕೆ ನೀಡಿತು. ಕ್ರಿಸ್ ಗೈಲ್ ತಮ್ಮ ನೈಜ ಆಟವಾಡಿದರು. ಇವರ ಮನಮೋಹಕ ಇನ್ನಿಂಗ್ಸ್ 69 ರನ್ ಗಳಿಗೆ ಕೊನೆ ಗೊಂಡಿತು. ಗೇಲ್ ಅಬ್ಬರದ ಇನ್ನಿಂಗ್ಸ್ ನಲ್ಲಿ 6 ಬೌಂಡರಿ ಹಾಗೂ 5 ಸಿಕ್ಸರ್ ಸೇರಿವೆ.
ಮಂದೀಪ್ ಸಿಂಗ್ 30 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಉಳಿದಂತೆ ಕೆಳ ಕ್ರಮಾಂಕದ ಆಟಗಾರರು ರನ್ ವೇಗಕ್ಕೆ ಚುರುಕು ಮುಟ್ಟಿಸಲಿಲ್ಲ. ಕೊನೆಯಲ್ಲಿ ಹರ್ಪೀತ್ ಬ್ರಾರ್ 20 ರನ್ ಸಿಡಿಸಿದರು.
ಡೆಲ್ಲಿ ಕ್ಯಾಪಿಟಲ್ಸ್ ಪರ ಸ್ಪಿನ್ ಬೌಲರ್ ಗಳು ಕಮಾಲ್ ಬೌಲಿಂಗ್ ಪ್ರದರ್ಶನ ನೀಡಿದರು ಸಂದೀಪ್ 40 ರನ್ ಗೆ 3 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಹಾಗೂ ರಬಾಡ ತಲಾ 2 ವಿಕೆಟ್ ಕಬಳಿಸಿದರು.
ಸಂಕ್ಷಿಪ್ತ ಸ್ಕೋರ್
ಕಿಂಗ್ಸ್ ಇಲೆವೆನ್ ಪಂಜಾಬ್ 20 ಓವರ್ ಗಳಲ್ಲಿ 7 ವಿಕೆಟ್ ಗೆ 163
(ಕ್ರಿಸ್ ಗೇಲ್ 69, ಮಂದೀಪ್ ಸಿಂಗ್ 30, ಸಂದೀಪ್ 40ಕ್ಕೆ 3, ಅಕ್ಷರ್ ಪಟೇಲ್ 22ಕ್ಕೆ 2, ಕಗಿಸೊ ರಬಾಡ 23ಕ್ಕೆ 2).
ಡೆಲ್ಲಿ ಕ್ಯಾಪಿಟಲ್ಸ್ 19.5 ಓವರ್ ಗಳಲ್ಲಿ 5 ವಿಕೆಟ್ ಗೆ 170
(ಶಿಖರ್ ಧವನ್ 56, ಶ್ರೇಯಸ್ ಅಯ್ಯರ್ ಅಜೇಯ 58, ವಿಲ್ಜೊಯೆನ್ 39ಕ್ಕೆ 2)
There is no row at position 0.