Wednesday, Apr 24 2024 | Time 12:51 Hrs(IST)
National Share

ತೈಲ ಉತ್ಪಾದನೆ ಕಡಿತದ ಭವಿ಼ಷ್ಯದ ಚರ್ಚೆಗೆ ಇದು ಸಕಾಲವಲ್ಲ : ರಷ್ಯಾ ಇಂಧನ ಸಚಿವರು

ಸೇಂಟ್ ಪೀಟರ್ಸ್‌ಬರ್ಗ್‌, ಜೂನ್ 24 (ಸ್ಪುಟ್ನಿಕ್) ಪೆಟ್ರೋಲಿಯಂ ರಫ್ತು ದೇಶಗಳ ಸಂಘಟನೆ (ಒಪೆಕ್) ಮತ್ತು ಒಪೆಕ್ ಯೇತರ ರಾಷ್ಟ್ರಗಳ ತೈಲ ಉತ್ಪಾದನೆ ಕಡಿತದ ಭವಿಷ್ಯ ಈಗ ಚರ್ಚಿಸಿದರು ಅದು ಅತಿ ಶೀಘ್ರವಾದೀತು, ಜಿ 20 ಶೃಂಗಸಭೆ ಸೇರಿದಂತೆ ಇನ್ನೂ ಹಲವು ವಿಚಾರಗಳಿಗೆ ಕಾಯಬೇಕಿದೆ ಎಂದು ರಷ್ಯಾ ಇಂಧನ ಸಚಿವ ಅಲೆಕ್ಸಾಂಡರ್ ನೋವಾಕ್ ಸೋಮವಾರ ಹೇಳಿದ್ದಾರೆ.
ವಿಶ್ವ ಪೆಟ್ರೋಲಿಯಂ ಮಂಡಳಿ ಭವಿಷ್ಯದ ನಾಯಕರ ಸಭೆಯ ನೇಪಥ್ಯದಲ್ಲಿ ನೋವಾಕ್ ಮಾತನಾಡಿದರು.
ಜಿ 20 ಶೃಂಗಸಭೆ ನಾಯಕರ ಸಭೆ ಮೊದಲಾದ ಕಾರ್ಯಕ್ರಗಳಿಗೆ ಕಾಯಬೇಕಿದೆ. ಅಲ್ಲಿ ಹೇಗೆ ಚರ್ಚೆ ನಡೆಯಲಿದೆ, ಮಾರುಕಟ್ಟೆ ಸ್ಥಿತಿಗತಿ ಆಧರಿಸಿ ನಂತರ ಒಪೆಕ್ ಮತ್ತು ಒಪೆಕ್ ಯೇತರ ಸಭೆ ನಡೆದರೆ ತೈಲ ಉತ್ಪಾದನೆ ಕಡಿತ ಪ್ರಸ್ತಾವದ ಪರಿಣಾಮಗಳ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಅವರು ಹೇಳಿದ್ದಾರೆ.
ಯುಎನ್ಐ ಜಿಎಸ್‌ಆರ್ 2317
There is no row at position 0.