Saturday, Apr 20 2024 | Time 07:31 Hrs(IST)
International Share

ಮೆಕ್ಸಿಕೋ-ಕೌಟುಂಬಿಕ ಔತಣಕೂಟದಲ್ಲಿ ಗುಂಡಿನ ದಾಳಿ-13 ಸಾವು

ಮೆಕ್ಸಿಕೋ ಸಿಟಿ, ಏ 20(ಕ್ಸಿನುಹಾ) ಪೂರ್ವ ಮೆಕ್ಸಿಕೋ, ವೆರಾಕ್ರಸ್ ರಾಜ್ಯದ ಮಿನಾಟಿಟ್ಲನ್ ನಗರದಲ್ಲಿ ಶುಕ್ರವಾರ ರಾತ್ರಿ ಕೌಟುಂಬಿಕ ಔತಣಕೂಟದಲ್ಲಿ ದುಷ್ಕರ್ಮಿಯೊಬ್ಬ ಏಕಾಏಕಿ ಗುಂಡು ಸುರಿಮಳೆಗೈದ ಪರಿಣಾಮ 13 ಜನರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಘಟನೆಯಲ್ಲಿ ಏಳು ಪುರುಷರು, ಐದು ಮಹಿಳೆಯರು ಹಾಗೂ ಒಂದು ಮಗು ಮೃತಪಟ್ಟಿದೆ.
ಕೌಟುಂಬಿಕ ಔತಣಕೂಟಕ್ಕೆ ಆಗಮಿಸಿದ್ದ ದುಷ್ಕರ್ಮಿಗಳು, ವ್ಯಕ್ತಿಯೋರ್ವನನ್ನು ಕಾಣಬೇಕು ಎಂದು ಒತ್ತಾಯಿಸಿ, ಗುಂಡು ಹಾರಿಸಲಾರಂಭಿಸಿದರು. ಅವರು ಹುಡುಕುತ್ತಿದ್ದ ವ್ಯಕ್ತಿಯನ್ನು ಆ ನಗರದ ಬಾರ್ ಒಂದರ ಮಾಲೀಕ ಎಂದು ಗುರುತಿಸಲಾಗಿದೆ. ಈ ಕೃತ್ಯಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.
ಆದರೆ, ಪೂರ್ವ ಮೆಕ್ಸಿಕೋ ಮಾದಕ ವ್ಯಸನಗಳನ್ನು ಸರಬರಾಜು ಮಾಡುವ ಗ್ಯಾಂಗ್ ನಡುವಿನ ಕಲಹಗಳಿಗೆ ಹೆಸರುವಾಸಿಯಾದ್ದರಿಂದ, ಈ ಘಟನೆ ಹಿಂದೆ ಕೂಡ ಇದೇ ಕಾರಣವಿರಬಹುದು ಎಂದು ಶಂಕಿಸಲಾಗುತ್ತಿದೆ. ಮೆಕ್ಸಿಕೋದ ವೆರಾಕ್ರೂಸ್ ಒಂದು ಅಪಾಯಕಾರಿ ನಗರ ಎಂದೇ ಖ್ಯಾತಿ ಗಳಿಸಿದೆ.
ಯುಎನ್ಐ ಎಸ್ಎಚ್ ಎಎಚ್ 1916
There is no row at position 0.