Thursday, Mar 28 2024 | Time 15:55 Hrs(IST)
International Share

ಮೆಕ್ಸಿಕೊ: ಸಶಸ್ತ್ರಧಾರಿಯಿಂದ ಒಂದೇ ಕುಟುಂಬದ 13 ಮಂದಿ ಹತ್ಯೆ

ಮೆಕ್ಸಿಕೊನಗರ, ಏ 20 (ಯುಎನ್‌ಐ) ಇಲ್ಲಿನ ವೆರರ್ಕುಜಾ ರಾಜ್ಯದ ಮಿನಟಿಟ್ಲಾನ್‌ ನಗರದಲ್ಲಿ ಶುಕ್ರವಾರ ರಾತ್ರಿ ನಡೆಯುತ್ತಿದ್ದ ಖಾಸಗಿ ಸಮಾರಂಭವೊಂದಕ್ಕೆ ದಾಳಿಯಿಟ್ಟ ಸಶಸ್ತ್ರಧಾರಿ ವ್ಯಕ್ತಿಯೊಬ್ಬ, ಒಂದೇ ಕುಟುಂಬದ 13 ಮಂದಿಯನ್ನು ಗುಂಡಿಕ್ಕಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ
ಈ ದುರ್ಘಟನೆಯಲ್ಲಿ ಓರ್ವ ಮಗುವಿನೊಂದಿಗೆ 5 ಮಹಿಳೆಯರು ಹತ್ಯೆಗೊಂಡಿದ್ದಾರೆ. ಉಳಿದ ನಾಲ್ವರು ಬದುಕುಳಿದಿದ್ದು, ಗಾಯಗೊಂಡಿದ್ದಾರೆ. ಒಟ್ಟು 13 ಜನ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ವಿಚಾರಣೆ ಪ್ರಗತಿಯಲ್ಲಿದೆ. ಫೆಡೆರಲ್‌ ಪಡೆ ಮತ್ತು ರಾಜ್ಯ ಭದ್ರತಾ ಸಿಬ್ಬಂದಿ ಶೋಧ ಕಾರ್ಯಾಚರಣೆಗೆ ಚಾಲನೆ ನೀಡಿದ್ದು, ಘಟನೆಗೆ ಕಾರಣವಾದ ಆರೋಪಿಗೆ ಪತ್ತೆಗಾಗಿ ಬಲೆ ಬೀಸಿದ್ದಾರೆ ಎಂದು ರಾಜ್ಯ ಭದ್ರತಾ ಕಾರ್ಯದರ್ಶಿ ಟ್ವೀಟ್‌ ಮಾಡಿದ್ದಾರೆ.
ರಾಜ್ಯ ಭದ್ರತಾ ಪಡೆಯೊಂದಿಗೆ ಫೆಡೆರಲ್‌ ಪ್ರಾಧಿಕಾರ ಕೈಜೋಡಿಸಿ ಘಟನೆಗೆ ಕಾರಣರಾದವರನ್ನು ಪತ್ತೆ ಮಾಡಲು ಕಾರ್ಯಾಚರಣೆ ಆರಂಭಿಸಿದೆ ಎಂದು ಫೆಡೆರಲ್‌ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೊಂದೆಡೆ ರಾಜ್ಯದ ಪ್ರಾಧಿಕಾರಿಗಳು ಈ ದುರ್ಘಟನೆಯ ಪರಿಶೀಲನೆ ಮತ್ತು ಖಂಡನೆಗಾಗಿ ತುರ್ತು ಸಭೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಆರೋಪಿ ಗುರುತು ಪತ್ತೆಯಾಗಿದ್ದು, ಆತನನ್ನು ಸೆರೆ ಹಿಡಿಯಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎನ್ನಲಾಗಿದೆ.
ಯುಎನ್‌ಐ ಕೆಎಸ್‌ವಿ ಎಸ್‌ಎಚ್‌ 1921
There is no row at position 0.