Thursday, Apr 25 2024 | Time 17:14 Hrs(IST)
Entertainment Share

ಮತ್ತೆ ಕರಣ್ ಜೋಹರ್ ಚಿತ್ರದಲ್ಲಿ ಅನನ್ಯ ಪಾಂಡೆ!

ಮುಂಬೈ, ಜೂನ್ 24 (ಯುಎನ್ಐ) ಇತ್ತೀಚೆಗಷ್ಟೇ ಕರಣ್ ಜೋಹರ್ ನಿರ್ಮಾಣದ 'ಸ್ಟೂಡೆಂಟ್ಸ್ ಆಫ್ ದಿ ಇಯರ್-2' ಚಿತ್ರದ ಮೂಲಕ ಬಿಟೌನ್ ಗೆ ಪಾದಾರ್ಪಣೆ ಮಾಡಿದ ಉದಯೋನ್ಮುಖ ನಟಿ ಅನನ್ಯ ಪಾಂಡೆ, ಈಗ ಮತ್ತೊಮ್ಮೆ ಅವರದೇ ಚಿತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಇತ್ತೀಚೆಗಷ್ಟೇ ಕರಣ್ ಹಾಗೂ ಅನನ್ಯ ಒಟ್ಟಿಗೆ ಕಾಣಿಸಿಕೊಂಡಿದ್ದೆ ಇಂತಹದೊಂದು ವದಂತಿ ಬಿಟೌನ್ ನಲ್ಲಿ ಹರಿದಾಡುವುದಕ್ಕೆ ಕಾರಣವಾಗಿದೆ. ಹೋಟೆಲ್ ವೊಂದರ ಎದುರಿಗೆ ಇಬ್ಬರೂ ಕ್ಯಾಮೆರಾ ಕಣ್ಣಿಗೆ ಸೆರೆಸಿಕ್ಕಿದ್ದಾರೆ.
ಹೊಸ ಚಿತ್ರವೊಂದಕ್ಕಾಗಿ ಇಬ್ಬರೂ ಹೋಟೆಲ್ ವೊಂದರಲ್ಲಿ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಆದರೆ, ಈ ಕುರಿತು ಯಾವುದೇ ಸ್ಪಷ್ಟನೆ ಹೊರಬಂದಿಲ್ಲ.
ಅನನ್ಯ ಶೀಘ್ರವೇ ನಟ ಕಾರ್ತಿಕ್ ಆರ್ಯನ್ ಅವರೊಂದಿಗೆ 'ಪತಿ, ಪತ್ನಿ ಔರ್ ಓ' ಚಿತ್ರದ ರಿಮೇಕ್ ದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರ ಹೊರತಾಗಿ, ಚಿತ್ರದಲ್ಲಿ ನಟಿ ಭೂಮಿ ಪೆಡ್ನೇಕರ್ ಕೂಡ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಯುಎನ್ಐ ಪಿಕೆ ವಿಎನ್ಎಲ್ 1835
There is no row at position 0.