Thursday, Mar 28 2024 | Time 21:55 Hrs(IST)
Entertainment Share

ಮತ್ತೊಮ್ಮೆ ತೆರೆಗೆ ಅಜಯ್-ಕಾಜೋಲ್ ಜೋಡಿ

ಮುಂಬಯಿ, ಏ 20 (ಯುಎನ್ಐ) ಹಿಂದಿಯ ಅನೀಸ್ ಬಜ್ಮಿ ನಿರ್ದೇಶನದ 'ಪ್ಯಾರ್ ತೋ ಹೋನಾ ಹಿ ಥಾ' ಚಿತ್ರದಲ್ಲಿ ಅಜಯ್-ಕಾಜೋಲ್ ಜೋಡಿ ನಟಿಸಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈಗ ಮತ್ತೊಮ್ಮೆ ಈ ದಂಪತಿಯನ್ನು ಒಂದೇ ಚಿತ್ರದಲ್ಲಿ ತೆರೆಗೆ ತರುವ ಯೋಚನೆಯಲ್ಲಿದ್ದಾರಂತೆ ಅನೀಸ್ ಬಜ್ಮಿ.
ಈ ಕುರಿತು ಮಾತನಾಡಿದ ಅನೀಸ್, ''ಉತ್ತಮ ಚಿತ್ರಕಥೆ ಇರುವುದರಿಂದ ಇಬ್ಬರ ಜೋಡಿಯಲ್ಲಿ ಚಿತ್ರವೊಂದನ್ನು ತೆರೆಗೆ ತರಲಿದ್ದೇನೆ. ಅಜಯ್ ದೇವಗನ್-ಕಾಜೋಲ್, ಜನವರಿ ತಿಂಗಳಲ್ಲಿ ಬಿಡುಗಡೆಯಾಗುವ 'ತಾನಾಜಿ: ದಿ ಅನ್ ಸಂಗ್ ವಾರಿಯರ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ನಿರ್ಮಾಣದ ಹೊಣೆಯನ್ನು ಸ್ವತಃ ಅಜಯ್ ದೇವಗನ್ ಹಾಗೂ ಭೂಷಣ್ ಕುಮಾರ್ ಹೊತ್ತುಕೊಂಡಿದ್ದಾರೆ ಎಂದರು.
ಸದ್ಯ ಅನೀಸ್ ಅವರು ತಮ್ಮ ಮುಂಬರುವ ಚಿತ್ರ 'ಪಾಗಲ್ ಪಂತಿ' ಚಿತ್ರೀಕರಣದಲ್ಲಿ ತೊಡಗಿದ್ದು, ಇದೊಂದು ರೋಮ್ಯಾನ್ಸ್ , ಹಾಸ್ಯಭರಿತ ಚಿತ್ರವಾಗಿದೆ ಎಂದಿದ್ದಾರೆ.
ಚಿತ್ರದ ಮುಖ್ಯ ಪಾತ್ರದಲ್ಲಿ ನಟರಾದ ಜಾನ್ ಅಬ್ರಾಹಿಂ, ಅನಿಲ್ ಕಪೂರ್ ಹಾಗೂ ನಟಿಯರಾದ ಇಲಿಯಾನಾ ಡಿಕ್ರೂಜ್, ಕೃತಿ ಕರಬಂದಾ ಸೇರಿದಂತೆ ಹಲವರಿದ್ದಾರೆ.
ಯುಎನ್ಐ ಪಿಕೆ ಎಸ್ಎಚ್ 1842
There is no row at position 0.