Friday, Apr 26 2024 | Time 03:58 Hrs(IST)
National Share

ವ್ಯಾಪಾರಿ ಸಮುದಾಯದ ದೇಶದ ಬೆನ್ನೆಲುಬು : ಪ್ರಧಾನಿ

ನವದೆಹಲಿ, ಏ 19 (ಯುಎನ್ಐ) ವ್ಯಾಪಾರಿ ಸಮುದಾಯ ಅಭಿವೃದ್ಧಿ ಮತ್ತು ತಮ್ಮ ಸರ್ಕಾರದ ಬೆನ್ನೆಲುಬುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಟಾಲ್ಕಟೋರಾ ಕ್ರೀಡಾಂಗಣದಲ್ಲಿಂದು ವರ್ತಕರ ಸಮಾವೇಶದಲ್ಲಿ ಮಾತನಾಡಿದ ಅವರು, ಈ ವರ್ಗವನ್ನು “ಚಿನ್ನದ ಹಕ್ಕಿ “ ಎಂದು ಕರೆದಿದ್ದಾರೆ.
ಸರಕು ಮತ್ತು ಸೇವಾ ತೆರಿಗೆ ಜಿಎಸ್‌ಟಿ ಪರ ಮಾತನಾಡಿರುವ ಮೋದಿ, ಜಿಎಸ್‌ಟಿ ಜಾರಿ ನಂತರ, ವ್ಯಾಪಾರದಲ್ಲಿ ಪಾರದರ್ಶಕತೆ ಇದೆ. ಜಿಎಸ್‌ಟಿ ಕುರಿತು ಪ್ರತಿಕ್ರಿಯೆ ಪಡೆದು ಸುಧಾರಣೆ ತರಲಾಗುತ್ತಿದೆ ಎಂದರು.
ಜಿಎಸ್‌ಟಿ ಯಿಂದಾಗಿ ರಾಜ್ಯಗಳ ಆದಾಯ ಒಂದೂವರೆ ಪಟ್ಟು ಹೆಚ್ಚಾಗಿದೆ ಎಂದು ಅವರು ತಿಳಿಸಿದರು.
ವಿಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಇನ್ಸ್‌ ಪೆಕ್ಟರ್ ರಾಜ್ ವ್ಯವಸ್ಥೆ ಬದಲಿಸುವಲ್ಲಿ ತಮ್ಮ ಸರ್ಕಾರ ಯಶಸ್ವಿಯಾಗಿದೆ ಎಂದರು.
ದೇಶದ ಅಭಿವೃದ್ಧಿಯಲ್ಲಿ ವ್ಯಾಪಾರಿ ಸಮುದಾಯದ ಕೊಡುಗೆ ಶ್ಲಾಘಿಸಿದ ಅವರು, ವ್ಯಾಪಾರಿ ಸಮುದಾಯ ದೇಶಕ್ಕಾಗಿ ಶ್ರಮಿಸಿದರೂ, ಹಿಂದಿನ ಸರ್ಕಾರಗಳನ್ನು ಅವರನ್ನು ಕಡೆಗಣಿಸಿತ್ತು ಎಂದರು.
ಕಳೆದ ಐದು ವರ್ಷಗಳಲ್ಲಿ ಸರ್ಕಾರ 1500 ನಿಯಮಗಳನ್ನು ರದ್ದುಪಡಿಸಿದ್ದು ಭಾರತ ವ್ಯಾಪಾರ ಸುಲಲೀಕರಣದಲ್ಲಿ 77ನೇ ಸ್ಥಾನಕ್ಕೆ ಜಿಗಿದಿದೆ.
ಆದಾಯ ತೆರಿಗೆ ಪರಿಶೀಲನಾ ವ್ಯವಸ್ಥೆಯನ್ನೂ ಬದಲಿಸಲಾಗಿದೆ. ಬಿಜೆಪಿ ನೇತೃತ್ವದ ಸರ್ಕಾರ 70 ವರ್ಷಗಳ ಹಳೆಯ ಪರಿಶೀಲನಾ ವ್ಯವಸ್ಥೆಯನ್ನು ಬದಲಿಸುವ ಜವಾಬ್ದಾರಿ ತೋರಿದೆ. ಮಾನವನ ಯಾವುದೇ ಹಸ್ತಕ್ಷೇಪವಿಲ್ಲದೇ ಈಗ ಆದಾಯ ತೆರಿಗೆ ಪರಿಶೀಲನೆ ಸಾಧ್ಯವಾಗಿದೆ ಎಂದು ಅವರು ಹೆಮ್ಮೆಯಿಂದ ನುಡಿದರು.
ವ್ಯಾಪಾರಸ್ಥರು ಸದಾ ದೇಶದ ಬಗ್ಗೆ ಚಿಂತಿಸಿದ್ದು ದೇಶದ ಅಗತ್ಯಗಳೊಂದಿಗೆ ತಮ್ಮ ಸಂಪರ್ಕಿಸಿಕೊಂಡಿದ್ದಾರೆ ಎಂದು ಮೋದಿ ತಮ್ಮ ಮೂವತ್ತು ನಿಮಿಷಗಳ ಭಾಷಣದ ವೇಳೆ ತಿಳಿಸಿದರು.

ಯುಎನ್ಐ ಜಿಎಸ್‌ಆರ್ ಕೆವಿಆರ್ 2002
There is no row at position 0.