Saturday, Apr 20 2024 | Time 01:38 Hrs(IST)
Entertainment Share

ವಾರಾಂತ್ಯದಲ್ಲಿ 70 ಕೋಟಿ ರೂ. ಬಾಚಿದ ಕಬೀರ್ ಸಿಂಗ್

ಮುಂಬೈ, ಜೂನ್ 24 (ಯುಎನ್ಐ) ಬಾಲಿವುಡ್ ನಟ ಶಾಹಿದ್ ಕಪೂರ್ ಅಭಿನಯದ 'ಕಬೀರ್ ಸಿಂಗ್' ಚಿತ್ರ ಮೊದಲ ವಾರಾಂತ್ಯದಲ್ಲಿಯೇ ಸುಮಾರು 70 ಕೋಟಿ ರೂ ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆಯುವ ಮೂಲಕ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಶಾಹಿದ್ ಕಪೂರ್ ಅಭಿನಯದ 'ಕಬೀರ್ ಸಿಂಗ್' ಚಿತ್ರ ಜೂನ್ 21ರಂದು ತೆರೆ ಕಂಡಿದ್ದು, ತೆಲುಗಿನ ಸೂಪರ್ ಹಿಟ್ 'ಅರ್ಜುನ್ ರೆಡ್ಡಿ' ರಿಮೇಕ್. ಸುಮಾರು 3,123 ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆಗೊಂಡಿತ್ತು.
ಶಾಹಿದ್ ಕಪೂರ್ ಹಾಗೂ ನಟಿ ಕಿಯಾರಾ ಅಡ್ವಾಣಿ ಮುಖ್ಯ ಭೂಮಿಕೆಯ 'ಕಬೀರ್ ಸಿಂಗ್' ಚಿತ್ರವು ಮೊದಲ ದಿನ 20.21 ಕೋಟಿ ರೂ. ಎರಡನೇ ದಿನ 22.71 ಹಾಗೂ ಮೂರನೇ ದಿನ 27.91 ಕೋಟಿ. ರೂ ಗಲ್ಲಾಪೆಟ್ಟಿಗೆ ತುಂಬಿಸಿದ್ದು, ವಾರಾಂತ್ಯದ ಅದರ ಪಾಲು 70.83 ಕೋಟಿ ರೂ. ಗೆ ತಲುಪಿದೆ.
ಸಂದೀಪ್ ರೆಡ್ಡಿ ವಂಗಾ ಈ ಚಿತ್ರವನ್ನು ನಿರ್ದೇಶಿಸಿದ್ದು, ತೆಲುಗಿನ ಮೂಲ ಚಿತ್ರವನ್ನು ಅವರೇ ನಿರ್ದೇಶಿಸಿದ್ದಾರೆ.
ಶಾಹಿದ್ ಕಪೂರ್ ಅವರ ನಟನೆಗೆ ಪ್ರೇಕ್ಷಕರ ವರ್ಗ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದೆ. ಇದೊಂದು ಮೆಡಿಕಲ್ ವಿದ್ಯಾರ್ಥಿಗಳ ಪ್ರೇಮ ಪುರಾಣ. ಸಿಟ್ಟು ಸ್ವಭಾವದ ಯುವಕನ ಪಾತ್ರದಲ್ಲಿ ಶಾಹಿದ್ ನಟಿಸಿದ್ದು, ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.
ಯುಎನ್ಐ ಪಿಕೆ ಕೆವಿಆರ್ 1805
There is no row at position 0.