Saturday, Apr 20 2024 | Time 15:23 Hrs(IST)
Sports Share

ವಿಶ್ವಕಪ್: ಗಾಯಾಳು ರಸೆಲ್ ಬದಲಿಗೆ ಸುನಿಲ್ ಅಂಬ್ರೆಸ್ ಗೆ ಸ್ಥಾನ

ದುಬೈ, ಜೂನ್ 24 (ಯುಎನ್ಐ)- ಮೊಣಕಾಲು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಸ್ಟಾರ್ ಆಲ್ ರೌಂಡರ್ ಆ್ಯಂಡ್ರಿ ರಸೆಲ್ ಅವರ ಬದಲಿಗೆ ಸುನಿಲ್ ಅಂಬ್ರಿಸ್ ಅವರಿಗೆ ತಂಡದಲ್ಲಿ ಸ್ಥಾನ ನೀಡಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಒಪ್ಪಿಗೆ ನೀಡಿದೆ.

ಆರಂಭಿಕ ಬ್ಯಾಟ್ಸ್ ಮನ್ ಅಂಬ್ರೆಸ್ ಅವರು ಆರು ಟೆಸ್ಟ್ ಹಾಗೂ ಆರು ಏಕದಿನ ಪಂದ್ಯ ಆಡಿದ್ದಾರೆ.

ಪ್ರಸಕ್ತ ವಿಶ್ವಕಪ್ ನಲ್ಲಿ ಬೌಲಿಂಗ್ ನಲ್ಲಿ ಕಮಾಲ್ ಪ್ರದರ್ಶನ ನೀಡಿದ್ದ ರಸೆಲ್ ನಾಲ್ಕು ಪಂದ್ಯಗಳಲ್ಲಿ ಐದು ವಿಕೆಟ್ ಪಡೆದು ಬೀಗಿದ್ದರು. ಬ್ಯಾಟಿಂಗ್ ನಲ್ಲಿ ಇವರು ತಂಡಕ್ಕೆ ಹೇಳಿಕೊಳ್ಳುವಂತಹ ಕಾಣಿಕೆ ನೀಡಿರಲಿಲ್ಲ. ಭಾರತದಲ್ಲಿ ನಡೆದಿದ್ದ ಐಪಿಎಲ್ ನಲ್ಲಿ ರಸೆಲ್ ಭರ್ಜರಿ ಪ್ರದರ್ಶನ ನೀಡಿ ಅಭಿಮಾನಿಗಳ ಮನ ಗೆದ್ದಿದ್ದರು.

ಯುಎನ್ಐ ವಿಎನ್ಎಲ್ ಕೆಎಸ್ವಿ 2242
There is no row at position 0.