Friday, Apr 19 2024 | Time 15:36 Hrs(IST)
International Share

ಶಾಲೆಯ ಗೋಡೆ ಕುಸಿದು ಆರು ಮಕ್ಕಳ ಸಾವು

ಕಂಪಾಲ, ಜೂನ್ 24 (ಯುಎನ್ಐ) ಶಾಲೆಯ ಗೋಡೆಯೊಂದು ಕುಸಿದ ಪರಿಣಾಮ ಶಾಲೆಯ ಬೀದಿ ಬದಿಯಲ್ಲಿ ಮಲಗಿದ್ದ ಆರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ ಘಟನೆ ಉಗಾಂಡ ರಾಜಧಾನಿ ಕಂಪಾಲದಲ್ಲಿ ನಡೆದಿದೆ.
ಪೊಲೀಸ್ ವಕ್ತಾರ ಪೆಟ್ರಿಕ್ ಯೋನ್ ಯಾಂಗೋ ಸುದ್ದಿಗಾರರೊಂದಿಗೆ ಮಾತನಾಡಿ, ಭಾರಿ ಮಳೆಯಾದ ಹಿನ್ನೆಲೆಯಲ್ಲಿ ಲೋಹಾನಾ ಹಾಯಿ ಶಾಲೆಯ ಗೋಡೆ ಕುಸಿದಿದ್ದು, ಫುಟ್ ಪಾತ್ ಮೇಲೆ ಮಲಗಿದ್ದ ಆರು ಮಕ್ಕಳು ಗೋಡೆಯ ಕೆಳಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಇಬ್ಬರು ಮಕ್ಕಳಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಯಎನ್ಐ ಪಿಕೆ ಎಎಚ್ 1917
There is no row at position 0.