Thursday, Apr 25 2024 | Time 04:18 Hrs(IST)
Sports Share

ಸ್ಥಿರ ಪ್ರದರ್ಶನ ನೀಡದೇ ಇರುವುದು ಬೇಸರ ತಂದಿದೆ: ಡುಪ್ಲೇಸಿಸ್

ಲಂಡನ್, ಜೂನ್ 24 (ಯುಎನ್ಐ)- ಪಾಕಿಸ್ತಾನ ವಿರುದ್ಧ ಸೋತು ಐಸಿಸಿ ವಿಶ್ವಕಪ್ ಟೂರ್ನಿಯಿಂದ ಹೊರ ನಡೆದಿರುವ ದಕ್ಷಿಣ ಆಫ್ರಿಕಾ ತಂಡದ ಪ್ರದರ್ಶನ ನಿರಾಶಾದಾಯಕ ಎಂದು ನಾಯಕ ಫಾಫ್ ಡುಪ್ಲೇಸಿಸ್ ಹೇಳಿದ್ದಾರೆ.
ಏಳು ಪಂದ್ಯಗಳಲ್ಲಿ ಐದು ಸೋಲು ಕಂಡಿರುವ ದಕ್ಷಿಣ ಆಫ್ರಿಕಾ ನಿರಾಸೆಯನ್ನು ಅನುಭವಿಸಿದ್ದು, ಪ್ರಸಕ್ತ ಟೂರ್ನಿಯಲ್ಲಿ ಲೀಗ್ ಹಂತದಲ್ಲೇ ಹೊರ ನಡೆಯುವುದು ನಿಶ್ಚಿತವಾಗಿದೆ. ಪಾಕ್ ವಿರುದ್ಧ 49 ರನ್ ಸೋತ ಬಳಿಕ, ಮುನ್ನಡೆಯ ಆಸೆಗೆ ಪೆಟ್ಟು ಬಿದ್ದಿದೆ.
'ಪಾಕ್ ವಿರುದ್ಧ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದೇವೆ. ಪಾಕಿಸ್ತಾನ ವಿರುದ್ಧ ನಮ್ಮ ಬೌಲಿಂಗ್ ಉತ್ತಮವಾಗಿರಲಿಲ್ಲ. ಟೂರ್ನಿಯಲ್ಲಿ ನಮ್ಮ ಬೌಲರ್ ಗಳು ಉತ್ತಮ ಪ್ರದರ್ಶನ ನೀಡಿ, ಮಹತ್ವದ ಪಂದ್ಯದಲ್ಲಿ ಕೈ ಚೆಲ್ಲಿದ್ದಾರೆ. ತಂಡದ ಆರಂಭ ಕಳಪೆಯಾಗಿತ್ತು. 300ಕ್ಕೂ ಹೆಚ್ಚು ರನ್ ಗಳನ್ನು ಹಿಂಬಾಲಿಸುವುದು ಸುಲಭದ ಮಾತಾಗಿರಲಿಲ್ಲ ಎಂದಿದ್ದಾರೆ.
ಸ್ಪರ್ಧಾತ್ಮಕ ಮೊತ್ತ ಹಿಂಬಾಲಿಸಿದಾಗ ಬೇಕಿದ್ದ ಆರಂಭ ತಂಡಕ್ಕೆ ಸಿಗಲಿಲ್ಲ. ವಿಕೆಟ್ ಮರ್ಮ ಅರಿತು ಬ್ಯಾಟ್ ಮಾಡುವುದನ್ನು ಬಿಟ್ಟು, ವಿಕೆಟ್ ನೀಡುತ್ತಾ ಸಾಗಿದೆವು ಎಂದು ಹೇಳಿದ್ದಾರೆ.
ಕಠಿಣ ತಾಲೀಮು ನಡೆಸಿದ್ದೆವು. ಆದರೆ, ಫಲ ನೀಡದೆ ಇರುವುದು ಬೇಸರ ತಂದಿದೆ. ಪಂದ್ಯದ ವೇಳೆ ಆತ್ಮವಿಶ್ವಾಸ ಸಹ ಮುಖ್ಯವಾಗುತ್ತದೆ. ಪಾಕ್ ಬೇಗನೆ ವಿಕೆಟ್ ಪಡೆದು, ಎದುರಾಳಿ ತಂಡದ ಮೇಲೆ ಒತ್ತಡ ಹೇರುತ್ತದೆ ಎಂದು ತಿಳಿಸಿದ್ದಾರೆ.
ಯುಎನ್ಐ ವಿಎನ್ಎಲ್ ಕೆಎಸ್ವಿ 2144
There is no row at position 0.