Tuesday, Apr 16 2024 | Time 19:37 Hrs(IST)
Entertainment Share

ಹಾಲಿವುಡ್ ಗೆ ಹಾರಲಿರುವ ಶೃತಿ!

ಮುಂಬೈ, ಜೂನ್ 24 (ಯುಎನ್ಐ) ಈಗಾಗಲೇ ಬಿಟೌನ್ ಬೆಡಗಿಯರಾದ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಹಾಗೂ ದೀಪಿಕಾ ಪಡುಕೋಣೆ ಹಾಲಿವುಡ್ ಪ್ರವೇಶಿಸಿದ್ದು, ಈಗ ಬಹುಭಾಷಾ ನಟಿ ಶ್ರ
ತಿ ಹಾಸನ್ ಕೂಡ ಅದೇ ಸಾಲಿನಲ್ಲಿದ್ದಾರೆ.
ಶೀಘ್ರವೇ ಶೃತಿ, ಅಮೆರಿಕನ್ ಟಿವಿ ಶೋ 'ಟ್ರೇಡ್ ಸ್ಟೋನ್' ನಲ್ಲಿ ಕಾಣಿಸಿಕೊಳ್ಳಲಿದ್ದು, ಕೊಲೆಗಾತಿಯ ಪಾತ್ರಕ್ಕೆ ಅವರು ಬಣ್ಣ ಹಚ್ಚಲಿದ್ದಾರೆ ಎಂಬ ಸುದ್ದಿಯನ್ನು ಖುದ್ದು ಇನ್ ಸ್ಟಾ ಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
'ಲಕ್' ಹಾಗೂ 'ರಾಮಯ್ಯ ವಸ್ತಾವಯ್ಯ' ಚಿತ್ರದ ಮುಖ್ಯಭೂಮಿಕೆ ಸೇರಿ ಹಲವು ವಿಭಿನ್ನ ಕಾಲಿವುಡ್, ಬಾಲಿವುಡ್ ಚಿತ್ರಗಳಲ್ಲಿ ಅಭಿನಯಿಸಿದ ಅವರು 'ಟ್ರೇಡ್ ಸ್ಟೋನ್' ಶೋದಲ್ಲಿ ಕೊಲೆ ಮಾಡಿ ದೆಹಲಿ ಹೋಟೆಲ್ ಒಂದರಲ್ಲಿ ವೇಟರ್ ಆಗಿ ಕಾರ್ಯನಿರ್ವಹಿಸುವ ನಾರಿ ಪಟೇಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಆ್ಯಕ್ಷನ್ ಫಿಕ್ಷನ್ ಡ್ರಾಮಾ ಆಧಾರಿತ ಕಥೆಯಾಗಿದೆಯಂತೆ.
ಯುಎನ್ಐ ಪಿಕೆ ಎಸ್ಎ 1709
There is no row at position 0.