Thursday, Apr 18 2024 | Time 22:00 Hrs(IST)
National Share

ಐಸಿಸ್‌ ಪ್ರಕರಣ: ಎನ್‌ಐಎಯಿಂದ ಹಲವು ಸ್ಥಳಗಳಲ್ಲಿ ದಾಳಿ

ಐಸಿಸ್‌ ಪ್ರಕರಣ: ಎನ್‌ಐಎಯಿಂದ ಹಲವು ಸ್ಥಳಗಳಲ್ಲಿ ದಾಳಿ
ಐಸಿಸ್‌ ಪ್ರಕರಣ: ಎನ್‌ಐಎಯಿಂದ ಹಲವು ಸ್ಥಳಗಳಲ್ಲಿ ದಾಳಿ

ನವದೆಹಲಿ, ಏ 20 (ಯುಎನ್‌ಐ) ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ಐಸಿಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಹೈದ್ರಾಬಾದ್‌ನ ಮೂರು ಕಡೆ ಮತ್ತು ವಾದ್ರಾ ಒಂದು ಸ್ಥಳದಲ್ಲಿ ದಾಳಿ ನಡೆಸಿದೆ.

ಐಸಿಸ್‌ ಸದಸ್ಯರು ಚಟುವಟಿಕೆ ನಡೆಸಿರುವ ಖಚಿತ ಮಾಹಿತಿ ಬೆನ್ನಲ್ಲೇ ದಾಳಿ ನಡೆಸಲಾಗಿದೆ ಎಂದು ಎನ್‌ಐಎ ಹೇಳಿದೆ. ಕೇಂದ್ರದ ಭಯೋತ್ಪಾದನಾ ತನಿಖಾ ದಳ ಶಂಕಿತ ನಾಲ್ವರನ್ನು ಪ್ರಶ್ನಿಸಿದೆ.

ದಾಳಿ ವೇಳೆ ಎನ್‌ಐಎ ಶಂಕಿತರ ನಿವಾಸಗಳಿಂದ 13 ಮೊಬೈಲ್‌ ಫೋನ್‌, 11 ಸಿಮ್‌ ಕಾರ್ಡ್‌, ಒಂದು ಐಪ್ಯಾಡ್‌, 2 ಲ್ಯಾಪ್‌ಟಾಪ್‌, ಒಂದು ಹಾರ್ಡ್‌ಡಿಸ್ಕ್‌, 6 ಪೆನ್‌ಡ್ರೈವ್‌, 6 ಎಸ್‌ಡಿ ಕಾರ್ಡ್‌ ಮತ್ತು 3 ವಾಕಿಟಾಕಿ ಸೆಟ್‌ಗಳನ್ನು ವಶಕ್ಕೆ ಪಡೆದುಕೊಂಡಿದೆ.

ಇಲ್ಲಿವರೆಗೆ ಶಂಕಿತರ ಹೆಸರನ್ನು ಸಂಸ್ಥೆ ಬಹಿರಂಗಗೊಳಿಸಿಲ್ಲ.

ಯುಎನ್‌ಐ ಕೆಎಸ್‌ವಿ ವಿಎನ್‌ಎಲ್‌ 2015

There is no row at position 0.