Saturday, Apr 20 2024 | Time 06:41 Hrs(IST)
Karnataka Share

ನನ್ನ ಬಳಿ ಅಕ್ರಮ ಸಂಪತ್ತಿದ್ದರೆ, ತನಿಖೆಗೆ ಆದೇಶಿಸಲಿ; ಬಿಜೆಪಿಗೆ ಮಲ್ಲಿಕಾರ್ಜುನ ಖರ್ಗೆ ಸವಾಲು

ನನ್ನ ಬಳಿ  ಅಕ್ರಮ ಸಂಪತ್ತಿದ್ದರೆ,   ತನಿಖೆಗೆ ಆದೇಶಿಸಲಿ;  ಬಿಜೆಪಿಗೆ ಮಲ್ಲಿಕಾರ್ಜುನ ಖರ್ಗೆ ಸವಾಲು
ನನ್ನ ಬಳಿ ಅಕ್ರಮ ಸಂಪತ್ತಿದ್ದರೆ, ತನಿಖೆಗೆ ಆದೇಶಿಸಲಿ; ಬಿಜೆಪಿಗೆ ಮಲ್ಲಿಕಾರ್ಜುನ ಖರ್ಗೆ ಸವಾಲು

ಕಲಬುರಗಿ,ಏಪ್ರಿಲ್ 20( ಯುಎನ್ಐ)- ಭ್ರಷ್ಟಾಚಾರ ನಡೆಸಿ 50 ಸಾವಿರ ಕೋಟಿ ರೂಪಾಯಿ ಮೌಲ್ಯದ ಅಕ್ರಮ ಸಂಪತ್ತು ಹೊಂದಿದ್ದೇನೆ ಎಂದು ಬಿಜೆಪಿ ನಾಯಕರು ತಮ್ಮ ವಿರುದ್ಧ ಮಾಡಿರುವ ಆರೋಪವನ್ನು ತಳ್ಳಿಹಾಕಿರುವ, ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇಂದ್ರದಲ್ಲಿ ಅವರದೇ ಪಕ್ಷದ ಸರ್ಕಾರವಿದ್ದು, ಯಾವುದೇ ತನಿಖಾ ಸಂಸ್ಥೆಯಿಂದ ಬೇಕಾದರೂ ತನಿಖೆ ಮಾಡಿಸಲಿ ಅದನ್ನು ಎದುರಿಸಲು ಸಿದ್ದ ಎಂದು ಸವಾಲು ಹಾಕಿದ್ದಾರೆ.



ಕೇಂದ್ರದಲ್ಲಿ ನಿಮ್ಮದೇ ಸರ್ಕಾರವಿದೆ. ಆದಾಯ ತೆರಿಗೆ ಇಲಾಖೆ ಅಥವಾ ಯಾವುದೇ ಇತರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಲಿ. ನಾನು ಅದನ್ನು ಎದುರಿಸಲು ಸಿದ್ದವಾಗಿದ್ದೇನೆ. ಆರೋಪ ನಿಜ ಎಂದು ಸಬೀತಾದರೆ ಜೈಲಿಗೆ ಹೋಗಲು ಸಿದ್ಧ ಎಂದು ಖರ್ಗೆ ಅವರು ಗುಡುಗಿದ್ದಾರೆ.



ನಲ್ವಾರ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಐದು ದಶಕಗಳ ರಾಜಕೀಯ ಜೀವನದಲ್ಲಿ ಯಾವುದೇ ಭ್ರಷ್ಟಚಾರ ನಡೆಸಿದ ಆರೋಪ ತಮ್ಮ ಮೇಲಿಲ್ಲ. ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಸ್ವಚ್ಛತೆ ಕಾಪಾಡಿಕೊಂಡು ಈ ಭಾಗದ ಹೆಸರು ಉಳಿಸಿದ್ದೇನೆ. ನಾನು ಏನು ಎಂಬುದು ಈ ಭಾಗದ ಜನರಿಗೆ ಚೆನ್ನಾಗಿ ಗೊತ್ತಿದೆ. ನನ್ನ ಭ್ರಷ್ಟಾಚಾರದ ಬಗ್ಗೆ ಬಿಜೆಪಿ ನಾಯಕರ ಬಳಿ ಯಾವುದಾದರೂ ಪುರಾವೆ ಇದ್ದರೆ ಏಕೆ ನನ್ನ ವಿರುದ್ಧ ತನಿಖೆಗೆ ಆದೇಶಿಸಬಾರದು ಎಂದು ಖರ್ಗೆ ಪ್ರಶ್ನಿಸಿದರು.



ಕೇಂದ್ರದಲ್ಲಿ ಬಿಜೆಪಿಯ ಸರ್ಕಾರವಿದೆ. ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಎಲ್ಲ ನಿಮ್ಮ ಪ್ರಧಾನ ಮಂತ್ರಿಯ ಬಳಿಯೇ ಇದೆ. ನಾನು ಅಕ್ರಮವಾಗಿ 50 ಸಾವಿರ ಕೋಟಿ ಸಂಪತ್ತು ಹೊಂದಿರುವುದು ಸತ್ಯವಾಗಿದ್ದರೆ ಏಕೆ ತನಿಖೆಗೆ ಆದೇಶಿಸುತ್ತಿಲ್ಲ ಎಂದು ಖರ್ಗೆ ಪ್ರಶ್ನಿಸಿದರು.



ನಾಗಪುರ್, ಬೆಂಗಳೂರು ಹಾಗೂ ಕೊಡಗು ಸೇರಿದಂತೆ ದೇಶಾದ್ಯಂತ ಮಲ್ಲಿಕಾರ್ಜುನ ಖರ್ಗೆ ಅವರು 50 ಸಾವಿರಕೋಟಿಗೂ ಹೆಚ್ಚು ಆಕ್ರಮ ಆಸ್ತಿ ಪಾಸ್ತಿ ಹೊಂದಿದ್ದಾರೆ ಎಂದು ಬಿಜೆಪಿ ನಾಯಕ ಮಾಲೀಕಯ್ಯ ಗುತ್ತೆದಾರ್ ಸೇರಿದಂತೆ ಬಿಜೆಪಿ ನಾಯಕರು ಆರೋಪಿಸಿದ್ದರು.



ಯುಎನ್ಐ ಕೆವಿಆರ್ ಎಎಚ್ 1816

There is no row at position 0.