Friday, Mar 29 2024 | Time 16:53 Hrs(IST)
Entertainment Share

ಯಶ್, ರಾಧಿಕಾ ಮುದ್ದಿನ ಮಗಳು ‘ಆಯ್ರಾ’

ಯಶ್, ರಾಧಿಕಾ ಮುದ್ದಿನ ಮಗಳು ‘ಆಯ್ರಾ’
ಯಶ್, ರಾಧಿಕಾ ಮುದ್ದಿನ ಮಗಳು ‘ಆಯ್ರಾ’

ಬೆಂಗಳೂರು, ಜೂನ್ 24 (ಯುಎನ್ಐ) ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಯ ಮುದ್ದಿನ ಪುತ್ರಿಗೆ ನಾಮಕರಣವಾಗಿದೆ.



ನಗರದ 'ತಾಜ್​ ವೆಸ್ಟ್​ ಎಂಡ್'​ ಹೋಟೆಲ್​ನಲ್ಲಿ ಜೂನ್ 23ರಂದು ಭಾನುವಾರ ನಡೆದ ಅದ್ದೂರಿ ಸಮಾರಂಭದಲ್ಲಿ ಯಶ್ ದಂಪತಿ ತಮ್ಮ ಕೂಸಿಗೆ ‘ಆಯ್ರಾ’ ಎಂದು ಹೆಸರಿಟ್ಟಿದ್ದಾರೆ. ತಮ್ಮಿಬ್ಬರ ಹೆಸರಿನ ಅಕ್ಷರಗಳನ್ನು ಸೇರಿಸುವುದರ ಜೊತೆಗೆ ಅರ್ಥಗರ್ಭಿತವಾದ ವಿಶೇಷ ಹೆಸರನ್ನು ಆಯ್ಕೆ ಮಾಡಿದ್ದಾರೆ.



ನಾಮಕರಣ ಸಮಾರಂಭಕ್ಕೆ ಆಪ್ತರನ್ನು ಮಾತ್ರ ಆಹ್ವಾನಿಸಲಾಗಿತ್ತು. ಈ ಕುರಿತು ನಟ ಯಶ್‌ ಟ್ವಿಟರ್‌ನಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದು, ನಾಮಕರಣದ ದೃಶ್ಯಾವಳಿಗಳನ್ನು ಸೆರೆಹಿಡಿಯಲಾಗಿದೆ. ವಿಡಿಯೋದ ಕೊನೆಯಲ್ಲಿ `ಆಯ್ರಾ ವಿ ಲವ್‌ ಯೂ' ಎಂದು ಹೇಳಲಾಗಿದ್ದು, 'ನಮ್ಮ ಪ್ರೀತಿಯ ಪುಟ್ಟ ರಾಜಕುಮಾರಿಯನ್ನು ಪರಿಚಯಿಸುತ್ತಿದ್ದೇವೆ. ನಮ್ಮದೇ ಉಸಿರಿನ ಮಗಳೆಂಬ ಕನಸಿಗೆ ಇಂದು ಹೆಸರಿಟ್ಟ ಸಂಭ್ರಮ. ಹರಸಿ ಹಾರೈಸಿ' ಎಂದು ಬರೆದುಕೊಂಡಿದ್ದಾರೆ.



‘ಆಯ್ರಾ’ ಎಂದರೆ ಜೀವನದ ಉಸಿರು, ವಿನಯಶೀಲತೆ, ಬದ್ಧತೆ, ಅರಿವು, ಕಣ್ತೆರೆಸು, ಗೌರವಾನ್ವಿತರು, ಭೂದೇವಿ ಸಹಿತಳಾದ ಲಕ್ಷ್ಮೀ ಮೊದಲಾದ ಅರ್ಥವಿದೆ.

ಯಶ್ ಮಗಳು ಹುಟ್ಟಿದ ಬಳಿಕ ಆಕೆಯನ್ನು ನೋಡಬೇಕೆಂಬ ಅಭಿಮಾನಿಗಳ ಒತ್ತಾಯಕ್ಕೆ ಮಣಿದು, ಸಾಮಾಜಿಕ ಜಾಲತಾಣಗಳಲ್ಲಿ ಫೋಟಿ ಶೇರ್ ಮಾಡಿದ್ದರು. ಇದೀಗ ನಾಮಕರಣದ ಫೋಟೋಗಳನ್ನೂ ಸಹ ರಾಕಿಂಗ್ ಸ್ಟಾರ್ ಬಿಡುಗಡೆಗೊಳಿಸಿದ್ದಾರೆ.



ಯುಎನ್ಐ ಎಸ್ಎ ವಿಎನ್ 1352

There is no row at position 0.