Thursday, Mar 28 2024 | Time 23:55 Hrs(IST)
Sports Share

ರಾಯಲ್ಸ್ ಗೆಲುವಿನಲ್ಲಿ ಸ್ಮಿತ್ ಮಿಂಚು

ರಾಯಲ್ಸ್ ಗೆಲುವಿನಲ್ಲಿ ಸ್ಮಿತ್ ಮಿಂಚು
ರಾಯಲ್ಸ್ ಗೆಲುವಿನಲ್ಲಿ ಸ್ಮಿತ್ ಮಿಂಚು

ಜೈಪುರ್, ಏ 20 (ಯುಎನ್ಐ) ಮಹತ್ವದ ಪಂದ್ಯದಲ್ಲಿ ಸಮಯೋಚಿತ ಬ್ಯಾಟಿಂಗ್ ನಡೆಸಿದ ನಾಯಕ ಸ್ಟೀವನ್ ಸ್ಮಿತ್ (ಅಜೇಯ 59) ಹಾಗೂ ರಿಯಾನ್ ಪರಾಗ್ (43 ರನ್) ಅವರುಗಳ ಉತ್ತಮ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ ರಾಯಲ್ಸ್ 5 ವಿಕೆಟ್ ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ, ಟೂರ್ನಿಯಲ್ಲಿ ಮೂರನೇ ಗೆಲುವು ದಾಖಲಿಸಿದೆ.

ಟಾಸ್ ಸೋತರೂ, ಮೊದಲು ಬ್ಯಾಟ್ ಮಾಡಿದ ಮುಂಬೈ 20 ಓವರ್ ಗಳಲ್ಲಿ 5 ವಿಕೆಟ್ ಗೆ 161 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್ ಇನ್ನು ಐದು ಎಸೆತ ಬಾಕಿ ಇರುವಂತೆ 5 ವಿಕೆಟ್ ನಷ್ಟಕ್ಕೆ 162 ರನ್ ಕಲೆ ಹಾಕಿ ಗೆಲುವು ಸಾಧಿಸಿತು.

ಸ್ಪರ್ಧಾತ್ಮಕ ಗುರಿಯನ್ನು ಹಿಂಬಾಲಿಸಿದ ರಾಜಸ್ಥಾನ ತಂಡದ ಆರಂಭಿಕ ಅಜಿಂಕ್ಯಾ ರಹನೆ ಹಾಗೂ ಸಂಜು ಸ್ಯಾಮ್ಸನ್ ತಂಡಕ್ಕೆ ಸಾಧಾರಣ ಜೊತೆಯಾಟ ನೀಡಿದರು. ರಹಾನೆ, ಚಹಾರ್ ಸ್ಪಿನ್ ಮೋಡಿಯನ್ನು ಅರಿಯುವಲ್ಲಿ ವಿಫಲರಾಗಿ ವಿಕೆಟ್ ಒಪ್ಪಿಸಿದರು. ಸಂಜು ಸ್ಯಾಮ್ಸನ್ ಆಕ್ರಮಣಕಾರಿ ಆಟದ ಸೂಚನೆ ನೀಡಿದರು. 19 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ನೆರವಿನಿಂದ 35 ರನ್ ಬಾರಿಸಿದ ಸಂಜು, ಚಹಾರ್ ಎಸೆತದಲ್ಲಿ ಪೊಲಾರ್ಡ್ ಗೆ ಕ್ಯಾಚ್ ನೀಡಿದರು.

ಬ್ಯಾಟಿಂಗ್ ನಲ್ಲಿ ಬಡ್ತಿ ಪಡೆದ ಬೆನ್ ಸ್ಟೋಲ್ಸ್ ಎದುರಿಸಿದ ಎರಡನೇ ಎಸೆತದಲ್ಲಿ ಬೋಲ್ಡ್ ಆದರು.

4ನೇ ವಿಕೆಟ್ ಗೆ ನಾಯಕ ಸ್ಮಿತ್ ಜೊತೆಗೂಡಿದ ರಿಯಾನ್ ಪರಾಗ ತಂಡವನ್ನು ಸಂಕಷ್ಟದಿಂದ ಪಾರು ಮಾಡುವ ಜವಾಬ್ದಾರಿಯನ್ನು ಹೊತ್ತುಕೊಂಡರು. ಮುಂಬೈ ಇಂಡಿಯನ್ಸ್ ತಂಡದ ಬಲಾಢ್ಯ ಬೌಲಿಂಗ್ ವಿಭಾಗವನ್ನು ಸಮರ್ಥವಾಗಿ ಎದುರಿಸಿದ ಜೋಡಿ ರನ್ ಕೊಳ್ಳೆ ಹೊಡೆಯಿತು. ಅಲ್ಲದೆ ರಾಯಲ್ಸ್ ಪರ ಗೆಲುವಿನ ಆಸೆ ಚಿಗುರಿಸಿತು. ಈ ಜೋಡಿ ತಂಡದ ಪರ 70 ರನ್ ಸೇರಿಸಿತು.

ರಿಯಾನ್ ಪರಾಗ್ ಇಲ್ಲದ ರನ್ ಕದಿಯಲು ಹೋಗಿ 43 ರನ್ ಗಳಿಗೆ ವಿಕೆಟ್ ಒಪ್ಪಿಸಿದರು.

ಕೊನೆಯವರೆಗೂ ಸ್ಮಿತ್ ಅಜೇಯರಾಗುಳಿದು ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು. ಮಹತ್ವದ ಪಂದ್ಯದಲ್ಲಿ ನಾಯಕ ಸ್ಮಿತ್ 48 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸೇರಿದಂತೆ 59 ರನ್ ಬಾರಿಸಿ ಅಜೇಯರಾಗುಳಿದರು.

ಇದಕ್ಕೂ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ರನ್ ಕಲೆ ಹಾಕುವಲ್ಲಿ ಪರದಾಡಿದರು. ಎರಡನೇ ವಿಕೆಟ್ ಗೆ ಸೂರ್ಯಕುಮಾರ್ ಯಾದವ್ ಹಾಗೂ ಆರಂಭಿಕ ಕ್ವಿಂಟನ್ ಡಿಕಾಕ್ ತಂಡವನ್ನು ಆಘಾತದಿಂದ ಮೇಲೆತ್ತಿದ್ದರು. ಈ ಜೋಡಿ ಸಮಯೋಚಿತ ಬ್ಯಾಟಿಂಗ್ ನಡೆಸಿತು. ರಾಜಸ್ಥಾನ ತಂಡದ ಬೌಲರ್ ಗಳನ್ನು ಕಾಡಿದ ಜೋಡಿ ಮುಂಬೈ ಅಭಿಮಾನಿಗಳಲ್ಲಿ ಮಂದಹಾಸ ಮೂಡಿಸಿತು.

ಎರಡನೇ ವಿಕೆಟ್ ಗೆ 97 ಜೋಡಿಸಿದ ಡಿಕಾಕ್ ಹಾಗೂ ಯಾದವ್ ತಂಡ ಉತ್ತಮ ಮೊತ್ತದತ್ತ ಮುಖಮಾಡಲು ನೆರವಾದರು. ಸೂರ್ಯಕುಮಾರ್ ದೊಡ್ಡ ಹೊಡೆತಕ್ಕೆ ಮುಂದಾಗಿ ಸ್ಟುವರ್ಟ್ ಬಿನ್ನಿ ಎಸೆತದಲ್ಲಿ ಧವಳ್ ಕುಲಕರ್ಣಿ ಅವರಿಗೆ ಕ್ಯಾಚ್ ನೀಡಿದರು.

ಕ್ವಿಂಟನ್ ಡಿಕಾಕ್ ಅವರ ಸೊಗಸಾದ 65 ರನ್ ಗಳ ಇನ್ನಿಂಗ್ಸ್ ಗೆ ಶ್ರೇಯಸ್ ಗೋಪಾಲ್ ಬ್ರೇಕ್ ಹಾಕಿದರು.

ರಾಜಸ್ಥಾನ ವಿರುದ್ಧ ಹಾರ್ದಿಕ್ ಪಾಂಡ್ಯ (23), ಕಿರನ್ ಪೋಲಾರ್ಡ್ (10), ಆರ್ಭಟ ನಡೆಯಲೇ ಇಲ್ಲ.

ಸಂಕ್ಷಿಪ್ತ ಸ್ಕೋರ್

ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 5 ವಿಕೆಟ್ ಗೆ 161

(ಕ್ವಿಂಟನ್ ಡಿಕಾಕ್ 65, ಸೂರ್ಯಕುಮಾರ್ ಯಾದವ್ 34, ಶ್ರೇಯಸ್ ಗೋಪಾಲ್ 21ಕ್ಕೆ 2)

ರಾಜಸ್ಥಾನ ರಾಯಲ್ಸ್ 20 ಓವರ್ ಗಳಲ್ಲಿ 5 ವಿಕೆಟ್ ಗೆ 162

(ಸ್ಟೀವನ್ ಸ್ಮಿತ್ ಅಜೇಯ 59, ರಿಯಾನ್ ಪರಾಗ್ 43, ದೀಪಕ್ ಚಹಾರ್ 29ಕ್ಕೆ 3).

There is no row at position 0.