Saturday, Apr 27 2024 | Time 06:31 Hrs(IST)
National Share

ಐದು ಲಕ್ಷ ಕೋಟಿ ಮೊತ್ತದ ಭಾರತಮಾಲಾ ಯೋಜನೆಗೆ ಅನುಮೋದನೆ

ನವದೆಹಲಿ, ಜೂನ್ 24 (ಯುಎನ್ಐ) ಭಾರತಮಾಲಾ ಪರಿಯೋಜನೆ ಮೊದಲ ಹಂತದಲ್ಲಿ ಅಂದಾಜು 5,35,000 ಕೋಟಿ ರೂ ವೆಚ್ಚದ 24,800 ಕಿಲೋಮೀಟರ್ ಉದ್ದದ ರಾಷ್ಟ್ರೀಯ ಹೆದ್ದಾರಿ ಮತ್ತು 10,000 ಕಿಲೋಮೀಟರ್ ಉದ್ದದ ಬಾಕಿ ರಸ್ತೆ ಕಾರ್ಯಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಸೋಮವಾರ ರಾಜ್ಯಸಭೆಗೆ ತಿಳಿಸಲಾಗಿದೆ.
ಈ ಯೋಜನೆಯಡಿ ರಸ್ತ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ 9,000 ಕಿಲೋಮೀಟರ್ ಉದ್ದದ ಆರ್ಥಿಕ ಕಾರಿಡಾರ್, 6000 ಕಿಲೋಮೀಟರ್ ಉದ್ದದ ಅಂತರ ಕಾರಿಡಾರ್ ಮತ್ತು ಫೀಡರ್ ರಸ್ತೆ, 5000 ಕಿಲೋಮೀಟರ್ ಉದ್ದದ ರಾಷ್ಟ್ರೀಯ ಕಾರಿಡಾರ್ ಸಾಮರ್ಥ್ಯ ಉನ್ನತೀಕರಣ, 2000 ಕಿಲೋಮೀಟರ್ ಉದ್ದರ ಕರಾವಳಿ ಮತ್ತು ಬಂದರು ಸಂಪರ್ಕ ರಸ್ತೆ, 800 ಕಿಲೋಮೀಟರ್ ಎಕ್ಸ್ಪ್ರೆಸ್ವೇ ಈ ಯೋಜನೆಯಡಿ ಸೇರಿವೆ ಎಂದು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಲಿಖಿತ ಉತ್ತರ ನೀಡಿದ್ದಾರೆ.
ಗಡಿ ಮತ್ತು ಅಂತಾರಾಷ್ಟ್ರೀಯ ರಸ್ತೆ ಸಂಪರ್ಕ ಯೋಜನೆಯಡಿ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಯಾವುದೇ ರಸ್ತೆ ಯೋಜನೆ ಇಲ್ಲ.ಸರ್ಕಾರೇತರ ಸಂಸ್ಥೆ ಎನ್ಜಿಒ ಗಳಿಗೆ ಹಣಕಾಸು ನೆರವು ನೀಡುವ "ರಸ್ತೆ ಸುರಕ್ಷತಾ ನೀತಿ" ಅನ್ನು ಸಹ 2017-18 ಹಣಕಾಸು ವರ್ಷದಲ್ಲಿ ಈ ಯೋಜನೆಯಡಿ ಜಾರಿಗೆ ತರಲಾಗಿದೆ ಎಂದು ಗಡ್ಕರಿ ಮತ್ತೊಂದು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಈ ಯೋಜನೆಯನ್ವಯ ರಸ್ತೆ ಸುರಕ್ಷತಾ ಕಾರ್ಯಕ್ರಮಗಳಿಗೆ ಐದು ಲಕ್ಷ ರೂಪಾಯಿ ಹಣಕಾಸು ನೆರವು ನೀಡಲಾಗುತ್ತದೆ. ಇದರಡಿ ಯಾವುದೇ ಪೂರ್ವಪಾವತಿ ಇರುವುದಿಲ್ಲ. ಕಾರ್ಯಕ್ರಮದ ಯಶಸ್ಸಿನ ನಂತರ ಹಣಕಾಸು ನೆರವಿನಡಿ ನಿರ್ದಿಷ್ಟ ಮೊತ್ತ ನೀಡಲಾಗುವುದು.
ಯುಎನ್ಐ ಜಿಎಸ್ಆರ್ ಎಎಚ್ 2133
There is no row at position 0.