Saturday, Apr 27 2024 | Time 04:14 Hrs(IST)
International Share

ಬಾಂಗ್ಲಾದೇಶದಲ್ಲಿ ರೈಲು ಹಳಿ ತಪ್ಪಿ ನಾಲ್ವರು ಸಾವು; 100 ಮಂದಿಗೆ ಗಾಯ

ಢಾಕಾ, ಜೂ 24 (ಯುಎನ್ಐ) ಈಶಾನ್ಯ ಬಾಂಗ್ಲಾದೇಶದ ಮೌಲ್ವಿಬಜಾರ್‌ನ ಕುಲೌರಾದ ಬೊರೋಮ್‌ಚಾಲ್‌ ಸೇತುವೆಯಲ್ಲಿ ಉಪಬನ್‌ ಎಕ್ಸ್ ಪ್ರೆಸ್‌ ರೈಲಿನ ಐದು ಬೋಗಿಗಳು ಹಳಿತಪ್ಪಿದ ಪರಿಣಾಮ ಕನಿಷ್ಠ ನಾಲ್ವರು ಮೃತಪಟ್ಟು 100ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಭಾನುವಾರ ರಾತ್ರಿ ಸ್ಥಳೀಯ ಕಾಲಮಾನ 11.50ಕ್ಕೆ ಈ ಘಟನೆ ನಡೆದಿದೆ ಎಂದು ಸ್ಥಳೀಯ ಅಗ್ನಿಶಾಮಕ ಸೇವೆಗಳ ಅಧಿಕಾರಿ ನೂರುನ್ ನಬಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಈಶಾನ್ಯ ಸಿಲ್ಹೆಟ್ ನಗರದಿಂದ ಢಾಕಾಕ್ಕೆ ತೆರಳುತ್ತಿದ್ದ ರೈಲಿನ ಒಂದು ಬೋಗಿ ಕಾಲುವೆಗೆ ಹಾಗೂ ಇತರ ಎರಡು ಬೋಗಿಗಳು ಕಾಲುವೆಯ ದಂಡೆಯ ಹತ್ತಿರ ಬಿದ್ದಿವೆ ಎಂದು ಕ್ಸಿನ್ಹುವಾ ವರದಿ ಮಾಡಿದೆ.
ಸ್ಥಳದಲ್ಲಿ ಕತ್ತಲು ಆವರಿಸಿದ್ದರಿಂದ ರಕ್ಷಣಾ ಕಾರ್ಯಕ್ಕೆ ಅಡಚಣೆಯಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಇದೆ ಎಂದು ನಬಿ ತಿಳಿಸಿದ್ದಾರೆ.
ಯುಎನ್ಐ ಎಎಚ್ ಆರ್ ಕೆ 954
There is no row at position 0.