Saturday, Apr 27 2024 | Time 02:34 Hrs(IST)
International Share

ಬಸ್ ಅಪಘಾತ: 11 ಮಂದಿ ಸಾವು; 29 ಮಂದಿಗೆ ಗಾಯ

ನೂರ್‌ ಸುಲ್ತಾನ್‌, ಏ 20 (ಸ್ಪುಟ್ನಿಕ್) ಬಸ್‌ ಅಪಘಾತವೊಂದರಲ್ಲಿ 11 ಮಂದಿ ಸಾವನ್ನಪ್ಪಿ, 29 ಮಂದಿ ಗಾಯಗೊಂಡಿರುವ ಘಟನೆ ಕಜಕಿಸ್ತಾನದಲ್ಲಿ ನಡೆದಿದೆ ಎಂದು ಅಲ್ಲಿನ ಆಂತರಿಕ ಸಚಿವಾಲಯದ ಮಂತ್ರಿ ಶನಿವಾರ ತಿಳಿಸಿದ್ದಾರೆ.
ಅಪಘಾತದ ಭೀಕರತೆಗೆ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದರು. ಗಾಯಗೊಂಡ 32 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಮೂವರು ಮೃತಪಟ್ಟರು ಎಂದು ಹೇಳಿಕೆ ತಿಳಿಸಿದೆ.
ಬೆಳಗ್ಗೆ 5 ಗಂಟೆಗೆ ಅಲ್ಮತಿ-ಟಾಸ್ಕೆಂಟ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಎರಡು ವಾಹನಗಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ ಈ ದುರಂತ ಸಂಭವಿಸಿದೆ.
50 ರಕ್ಷಣಾ ಕಾರ್ಯಕರ್ತರು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ದುರಂತದ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಯುಎನ್ಐ ಎಎಚ್ ಆರ್‌ಕೆ 1245
There is no row at position 0.