Friday, Apr 26 2024 | Time 10:09 Hrs(IST)
Special Share

ಅಬುಧಾಬಿಯಲ್ಲಿ ಮೊದಲ ಹಿಂದೂ ದೇಗುಲ ನಿರ್ಮಾಣಕ್ಕೆಶಿಲಾನ್ಯಾಸ; ಮೋದಿ ಅಭಿನಂದನೆ

ಅಬುಧಾಬಿಯಲ್ಲಿ ಮೊದಲ ಹಿಂದೂ ದೇಗುಲ ನಿರ್ಮಾಣಕ್ಕೆಶಿಲಾನ್ಯಾಸ; ಮೋದಿ ಅಭಿನಂದನೆ
ಅಬುಧಾಬಿಯಲ್ಲಿ ಮೊದಲ ಹಿಂದೂ ದೇಗುಲ ನಿರ್ಮಾಣಕ್ಕೆಶಿಲಾನ್ಯಾಸ; ಮೋದಿ ಅಭಿನಂದನೆ

ಅಬುಧಾಬಿ, ಏಪ್ರಿಲ್ 20(ಯುಎನ್ಐ)- ಸಂಯುಕ್ತ ಅರಬ್ ಎಮಿರೇಟ್ಸ್ – ಯುಎಇ ರಾಜಧಾನಿ ಅಬುಧಾಬಿಯಲ್ಲಿ ಮೊಟ್ಟ ಮೊದಲ ಹಿಂದೂ ದೇಗುಲ ನಿರ್ಮಾಣದ ಅಡಿಗಲ್ಲು ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯರು ಪಾಲ್ಗೊಂಡಿದ್ದರು.



ಈ ಸಂದರ್ಭದಲ್ಲಿ ಯುಎಇ ನಲ್ಲಿರುವ ಭಾರತೀಯ ರಾಯಭಾರಿ ನವದೀಪ್ ಸೂರಿ, ದೇಗುಲ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟಿರುವ ಕೊಲ್ಲಿ ದೇಶವನ್ನು ಅಭಿನಂದಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಸಂದೇಶವನ್ನು ಓದಿದರು.

130 ಕೋಟಿ ಭಾರತೀಯರ ಪರವಾಗಿ ಆತ್ಮೀಯ ಗೆಳೆಯ ಹಾಗೂ ಅಬುದಾಭಿ ರಾಜಕುಮಾರ ಶೇಖ್ ಮೊಹಮದ್ ಬಿನ್ ಝೆಯಾದ್ ಅಲ್ ನಯಾನ್ ಅವರಿಗೆ ಪ್ರಧಾನಿ ಮೋದಿ ತಮ್ಮ ಸಂದೇಶದಲ್ಲಿ ಅಭಿನಂಧನೆ ಸಲ್ಲಿಸಿದ್ದಾರೆ

ದೇಗುಲ ಪೂರ್ಣಗೊಂಡ ನಂತರ, ಭಾರತ ಹಾಗೂ ಯುಎಇ ನಡುವಣ ಪಾರಂಪರಿಕ ಸಾಂಸ್ಕೃತಿಕ ವಿನಿಮಯ, ಸಾರ್ವತ್ರಿಕ ಮಾನವೀಯ ಮೌಲ್ಯ ಹಾಗೂ ಆಧ್ಯಾತ್ಮಿಕ ಪರಂಪರೆ ಸಂಕೇತವಾಗಲಿದೆ ಎಂದು ಪ್ರಧಾನಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ



ದೇಗುಲ ನಿರ್ಮಾಣ ಮಾಡುತ್ತಿರುವ ಬಿಎಪಿಎಸ್ ಆಧ್ಯಾತ್ಮಿಕ ಮುಖ್ಯಸ್ಥ ಮಹಂತ ಸ್ವಾಮಿ ಮಹಾರಾಜ್, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಭೂಮಿ ಪೂಜೆ ನೆರವೇರಿಸಿ, ಮೊದಲ ಇಟ್ಟಿಗೆ ಇರಿಸಿದರು.



ದೇವಾಲಯ, ಕಾಲತೀತ ಭಾರತೀಯ ವೇದಗಳ ಮೌಲ್ಯಗಳು ಹಾಗೂ ಇಡೀ ವಿಶ್ವವೇ ಒಂದು ಕುಟುಂಬ ಎಂಬ ಮಹೋನ್ನತ ಸಂದೇಶವನ್ನು ದೇಗುಲ ಪ್ರತಿಪಾದಿಸಲಿದೆ ಎಂದು ಭಾರತೀಯ ರಾಯಬಾರಿ ಹೇಳಿದರು.



20 15ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯುಎಇಗೆ ಮೊದಲ ಬಾರಿ ಯುಎಇಗೆ ಭೇಟಿ ನೀಡಿದ್ದಾಗ ಅಬುಧಾಬಿ ಸರ್ಕಾರ ಸದ್ಭಾವನಾ ಕ್ರಮವಾಗಿ ದೇಗುಲ ನಿರ್ಮಿಸುವ ಯೋಜನೆಗೆ ಅನುಮೋದನೆ ನೀಡಿತ್ತು

ಯುಎನ್ಐ ಕೆವಿಆರ್ ಎಎಚ್ 1912

There is no row at position 0.